ಮದುವೆ ಮನೆ ಎಂದರೆ ಇನ್ನಿಲ್ಲದ ಸಂಬ್ರಮ ! ತೀರ ಹತ್ತಿರದ ಮದುವೆ ಅಂದರೆ ಸಂಬ್ರಮದ ತೂಕ ಇನ್ನೂ ಹೆಚ್ಚು !! ಪೆಟ್ಟಿಗೆಯಲ್ಲಿ ಮಡಚಿಟ್ಟ ಹಳೆಯ ರೇಷ್ಮೆ ಸೀರೆಗೆ ಹೊರ ಪ್ರಪಂಚವನ್ನು ನೋಡುವ ಸಂಬ್ರಮ .., ಬ್ಲೌಸು ಮ್ಯಾಚಿಂಗ್ ಆಗತ್ತಾ ..? ಅಳತೆ ಸರಿಯಾಗಿದೆಯ ? ಈ ಸೀರೆ ಹೋದ ವರ್ಷ ಉಟ್ಟಿರುವೆನ ? ಹೀಗೆ ಸಾಗುತ್ತದೆ ಹೆಂಗಸರ ಯೋಚನೆಗಳು !! ಇನ್ನೂ ಹೆಣ್ಣುಮಕ್ಕಳಿಗಂತೂ ಮುಗಿಯದ ಶಾಪಿಂಗ್ !! ಮೊದಲ ಸಲ ಸೀರೆ ಉಡುವ ಸಂಬ್ರಮವಂತೂ ಅನುಭವಿಸಿದ ಹುಡುಗಿಯರಿಗೆ ಗೊತ್ತು !! ಯಾವ ಸೀರೆ ಚೆನ್ನಾಗಿರತ್ತೆ ? ಯಾವ ಕಲರ್ ? ಬ್ಲೌಸ್ ಯಾವ ಡಿಸೈನ್ ಇದ್ದರೆ ಚೆಂದ ? ಸೀರೆ ಉಟ್ಟರೆ ತಾನು ನಡೆಯಬಲ್ಲೇನ ? ಮ್ಯಾಚಿಂಗ್ ಬಳೆ , ಸರ .. ಒಹ್..!! ಶಾಪಿಂಗ್ ಸುರಿಮಳೆ !!
ನಗರ ಜೀವನ ನಡೆಸುತ್ತಿರುವವರು .., ಮದ್ಯದೊಂದು ಭಾನುವಾರ ಬಂದರೆ 3 ದಿನ ರಜ ಹಾಕಬಹುದಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾರೆ .., ಲಗ್ಗೆಜೆ ಪ್ಯಾಕ್ ಮಾಡಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು , ಮುಂಚೆಯೇ ಬುಕ್ ಮಾಡಿಸಿದ ಬಸ್ಸನ್ನು ಹತ್ತಿಕೊಳ್ಳುವಾಗ ಎಂತದ್ದೋ ಸಂಬ್ರಮ !
ಮದುವೆ ಮನೆಯಲ್ಲಿ ತುಂಬಾ ಇಷ್ಟವಾಗುವ ಸಂಗತಿಯೆಂದರೆ , ನಾವು ಎಷ್ಟೋ ವರ್ಷಗಳಿಂದ ನೋಡದೇ ಇರುವ ಎಲ್ಲರನ್ನೂ ಒಟ್ಟಿಗೆ ನೋಡಬಹುದು ! ಚಿಕ್ಕಮ್ಮ ,ಚಿಕ್ಕಪ್ಪ ,ಅತ್ತೆ , ಮಾವ , ಅವರ ಮಕ್ಕಳು ,ಅತ್ತಿಗೆ , ಭಾವ , ಅಜ್ಜ , ಅಜ್ಜಿ ಅಮ್ಮುಮ್ಮ .., ಹೀಗೆ .., ಹಾಗೆ ಸುಮ್ಮನೆ ಎಲ್ಲರೂ ಸೇರುವುದು ವಾಸ್ತವಕ್ಕೆ ದೂರವಾದ ಮಾತು , ಅದೇನೇ ಚಿಕ್ಕ ಪುಟ್ಟ ಸಮಸ್ಯೆ, ತೊಂದರೆ ತಾಪತ್ರಯಗಳಿದ್ದರೂಗಳಿದ್ದರೂ ಮನೆಯೊಳಗೇ ಇಟ್ಟು ಬಾಗಿಲು ಹಾಕಿ ಮದುವೆ ಮನೆಗೆ ಹೊರಟು ಬಿಡುತ್ತೇವೆ !
ಹಳ್ಳಿಗಳಲ್ಲಿ ಮದುವೆ ಅಂದರೆ 2 ದಿನ ಮುಂಚೆಯೇ ಕಾರ್ಯಕ್ರಮಗಳು ಶುರುವಿಟ್ಟು ಕೊಳ್ಳುತ್ತದೆ , ಗಂಡಿನ ಮನೆಯಾದರೆ ಸೋಮವರ್ಥನೆ , ಹೆಣ್ಣಿನ ಮನೆಯಾದರೆ ನಾಂದಿ ಇಟ್ಟುಕೊಳ್ಳುತ್ತಾರೆ . ಮರುದಿನ ಬೆಳ್ಳಗ್ಗೆ ಬೇಗ ಎದ್ದು ತಯಾರಿಯಾಗಿ ಗಂಡಿನವರಾದರೆ ದಿಬ್ಬಣ ಹೋರಡಬೇಕು , ಹೆಣ್ಣಿನವರಾದರೆ ದಿಬ್ಬಣ ಬರಮಾಡಿಕೊಳ್ಳಬೇಕು . ಆ ನಂತರ ಹಾರ ಬದಲಾವಣೆ , ಮಾಂಗಲ್ಯ ಧಾರಣೆ , ಸಪ್ತಪದಿ .. ಹೋಮ .. ಹೀಗೆ ಸಾಗುತ್ತದೆ ಮದುವೆಯ ಶಾಸ್ತ್ರಗಳು .
ಮದುವೆಗಳನ್ನು ಊರು ಹಳ್ಳಿಗಳ ಕಡೆ ನೋಡಿ ಅಬ್ಯಾಸವಿದ್ದ ನನಗೆ ಬೆಂಗಳೂರು ಮದುವೆ ನೋಡಿ ಆಶ್ಚರ್ಯ ಪಟ್ಟಿದ್ದೆ ! ಇಲ್ಲಿ ಮದುವೆ ಅಂದರೆ ಬಣ್ಣ ಹಚ್ಚಿಕೊಂಡ ಮದುಮಕ್ಕಳು ಸ್ಟೇಜ್ ಮೇಲೆ ನಿಂತಿರುತ್ತಾರೆ . ನಾವು ಸ್ಟೇಜ್ ಮೇಲೆ ಹೋಗಿ ಕ್ಲೋಸ್ ಅಪ್ ಆಡ್ ತರ ಹಲ್ಲು ತೋರಿಸಿ ಹ್ಯಾಪಿ ಮ್ಯಾರೀಡ್ ಲೈಫ್ ಅಂತ ಉಸುರಿ ಫೋಟೋಗ್ರಾಫರ್ ಪರ್ಮಿಷನ್ ಕೊಟ್ಟಮೇಲೆ ಸ್ಟೇಜ್ ನಿಂದ ಕೆಳಗಿಳಿದು ಬರಬೇಕು ! ಹಾಗಾದರೆ ಮದುವೆ ಮುಗಿದಂತೆ ! ಅಥವಾ ನಾನು ನೋಡಿದ ಮದುವೆಗಳು ಮಾತ್ರ ಹಾಗಿತ್ತೇನೋ ..
ನಗರದಷ್ಟಲ್ಲವಾದರೂ ಹಳ್ಳಿಗಳಲ್ಲಿ ಮದುವೆಯ ರೀತಿ ರಿವಾಜು ಹಾಗೆ ಇದ್ದರೂ ಸ್ವರೂಪದಲ್ಲಿ ಬದಲಾವಣೆಯಾಗಿದೆ . ಮನೆಯ ಮುಂದಿನ ಚಪ್ಪರ ಮರೆಯಾಗಿ ಅದೇ ಜಾಗದಲ್ಲಿ ಶಾಮಿಯಾನ ಬಂದು ನಿಂತಿದೆ . 4-5 ದಿನಗಳವರೆಗೆ ನಡೆಯುತ್ತಿದ್ದ ಮದುವೆಗಳು 2 ದಿನಕ್ಕೆ ಬದಲಾಗಿದೆ . ಕೂಲಿ ಕೆಲಸಗಾರರ ಅಭಾವ , ಜನರ ಅಭಾವ , ಸಮಯ ಅಭಾವಗಳು ಮದುವೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ತಂದಿದೆ .
ಅಣ್ಣನ ಮದುವೆ ಮುಗಿಸಿ ಬೆಂಗಳೂರಿಗೆ ಬಂದು 4 ದಿನಗಳಾದರೂ ಇನ್ನೂ ಅದರದ್ದೇ ಗುಂಗು ! ಕೈಯಲ್ಲಿನ ಮದರಂಗಿ , ದಿಬ್ಬಣ ಬಸ್ಸಿನ ಅಂತಾಕ್ಷರಿ , ಎಲ್ಲರೂ ಸೇರಿ ಕಲೆತು ಆಡಿದ ಮಾತು , ನಗು, ರಾತ್ರಿಯಲ್ಲಿ ಮಿನುಗುವ ಲೈಟ್ ಸೆಟ್ಟಿಂಗ್ಸ್ , ಹುಡುಗಿಯರ ಗೆಜ್ಜೆ ದನಿ , ಹೆಂಗಸರ ಬಳೆ ಸದ್ದು , ಮಕ್ಕಳ ಕೂಗಾಟ, ಎಲ್ಲರ ಗಡಿಬಿಡಿ , ಗಡಿಬಿಡಿಯಲ್ಲಿನ ಸಂಬ್ರಮ , ಮದುವೆ ಮನೆಯಲ್ಲಿ 4-5 ದಿನ ಹೇಗೆ ಕಳೆಯಿತು ತಿಳಿಯದಷ್ಟು ಸಂಬ್ರಮವಾಗಿ ಸಮಯ ಉರುಳಿತ್ತು .
ಅಣ್ಣನ ಮದುವೆ ಮುಗಿಸಿ ಅಲ್ಲಿಂದ ಹೊರಟುನಿಂತಾಗ ಭಾರವಾಗಿದ್ದು; ಬ್ಯಾಗನ್ನು ಏರಿಸಿಕೊಂಡ ಹೆಗಲೊಂದೇ ಅಲ್ಲ ಅನ್ನಿಸಿತ್ತು. ..!! ಈಗ ಉಳಿದಿದ್ದು ಮೊಣಕೈಯವರೆಗೆ ಹಚ್ಚಿಕೊಂಡ ಮದರಂಗಿ ಮತ್ತು ಅದನ್ನು ನೋಡಿದಾಗಲೆಲ್ಲ ಮರುಕಳಿಸುವ ಅಣ್ಣನ ಮದುವೆಯ ಸಿಹಿ ನೆನಪು ಮಾತ್ರ !!!
Super akka.. gud article
ReplyDeleteThank u...
DeleteThanks a lot.., kindly mention ur name..
Deletegud one , keep writting.
ReplyDeleteThanks a lot !! please mention ur name with coment...
DeleteGood oone. Good writing style.
ReplyDeleteThanks Pragati.
Deleteu stolen my thoughts :-) good one
ReplyDelete:) Thanks Anna..
Delete