Monday, October 29, 2012

ತಪ್ತ ವಿರಹಿಣೀ .....





                                                           
 
 
 
ಕೆನ್ನೆಯ ಮೆಲಿದ್ದ ಕೂದಲು ಸರಿಸಿ
ತಲೆ ನೇವರಿಸಿ
ಮುತ್ತಿನ ಶುಭೋದಯ ತರುತ್ತಿದ್ದ
ಆತನೆಲ್ಲಿ ......?
ಕೃಷ್ಣನಿಗೋ  ಮುಗಿಯದ ರಾಜಕಾರಣ;


ಮುತ್ತಿಗೊಂದು ತುತ್ತಿಡುತ್ತ
ತುತ್ತಿಗೊಂದು ಮುತ್ತಿಡುತ್ತ
ಬರಿದಾಗಿಸುತ್ತಿದ್ದ ತಟ್ಟೆಗೂ ನೆನಪಿದೆ
ಆತನೆಲ್ಲಿ ........?
ಕೃಷ್ಣನಿಗೋ ಸದಾ ಗೋಪಿಕೆಯರ ಜೊತೆ;


ಆಸೆಗಳ ಭಾರಕ್ಕೆ ಮುಚ್ಚಿದ  ರೆಪ್ಪೆಗಳಿಗೆ
ಬಾಗಿ ಚುಂಬಿಸಿ
ಲೋಕವನ್ನೇ ಮರೆಸುತ್ತಿದ್ದ
ಆತನೆಲ್ಲಿ .........?
ಕೃಷ್ಣನಿಗೋ  ಯುದ್ದ ಸಂಬ್ರಮ;


ಪ್ರಳಯವೇ ಸಂಭವಿಸಿದರೂ
  ಸುರಕ್ಷಿತವೆನಿಸುವಂತೆ
ಬಿಗ್ಗಿಬಿಗಿ ಬಾಹುಗಳಲ್ಲಿ  ಬಂಧಿಸುತ್ತಿದ್ದ
ಆತನೆಲ್ಲಿ ........?
ಕೃಷ್ಣನಿಗೋ ಅಪಹರಣಕಾಯದಲ್ಲಿ ತನ್ಮಯ;


ಸ್ವಲ್ಪವೂ ಸುಕ್ಕಾಗದ ಚಾದರ
ನೀರಸ ಬೇಸರದ  
ಕಾಯುವಿಕೆಯ ಕತೆ ಹೇಳುವಾಗ
ಆತನೆಲ್ಲಿ ......?
ಕೃಷ್ಣನಿಗೋ  16 ಸಾವಿರ ಹೆಂಡತಿಯರು ;


ರಾಧೆಗೋ  ಕೃಷ್ಣನೇ  ಆಕೆಯ ಪ್ರಪಂಚ
ಕೃಷ್ಣನಿಗೆ ಆಕೆಯು ಪ್ರಪಂಚದ ಒಂದು ಭಾಗ;


ರಾಧೆಯಂತಿರುವ  ಹೆಣ್ಣುಗಳು 
 ಮೆಚ್ಚೋ... ಹುಚ್ಚೋ ...
ಗೊತ್ತಿಲ್ಲ  ನಮಗೆ
ಗೊತ್ತಿರುವ ಕೃಷ್ಣ  ನಗುತ್ತಿದ್ದಾನೆ ಕಣ್ಣಲ್ಲೇ .


 

2 comments:

----------------------------------