Friday, December 4, 2020

ಬಹುಶಃ  ಎಲ್ಲಾ ಪಾಲಕರನ್ನು ಬಹುವಾಗಿ ಚಿಂತೆಗೀಡುಮಾಡುವ ಒಂದು ಸಮಸ್ಯೆ ಎಂದರೆ ಅದು ಮಕ್ಕಳು ಮೊಬೈಲು ಟ್ಯಾಬ್ ಲ್ಯಾಪ್ಟಾಪ್ ಗಳಲ್ಲಿ ಮುಳುಗಿ ಹೋಗುತ್ತಿರುವುದು. ಅದರಿಂದ ಆಗಬಹುದಾದ  ಕಣ್ಣು ಮತ್ತು ಆರೋಗ್ಯಕ್ಕೆ ಸಂಭಂದಿಸಿದ ಸಮಸ್ಯೆಗಳು ಒಂದು ಕಡೆಯಾದರೆ ಇನ್ನೊಂದು ಕಡೆಯಿಂದ ಅವರ ದೈಹಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇತರ ಮಕ್ಕಳೊಂದಿಗೆ ಬೆರೆತು ಆಡುವುದರಿಂದ ಸಿಗಬಹುದಾದ ವಾಸ್ತವತೆಯ ಅನುಭವದಿಂದ ವಂಚಿತರಾಗುತ್ತಾರೆ. ಇದ್ದಿರಬಹುದಾದ ಬೆಳೆಸಿಕೊಳ್ಳಬಹುದಾದ  ಕಲೆ ಕೌಶಲ್ಯ ಗಳ ಸಾಧ್ಯತೆಗಳಿಂದ ಹೊರತಾಗುತ್ತಾರೆ. ಮನೋರಂಜನೆ ಮಿತಿ ಮೀರಿ ಬಾಲ್ಯದ ಹದವನ್ನು  ತಪ್ಪಿಸುತ್ತಿದೆಯಾ ಎನ್ನುವ ದಿಗಿಲಾಗುತ್ತದೆ ಒಮ್ಮೊಮ್ಮೆ  ಪಾಲಕರಿಗೆ.

ಮಕ್ಕಳು ಮೊಬೈಲನ್ನು ಅತಿಯಾಗಿ ನೋಡುತ್ತಾರೆ, ಯಾವಾಗಲೂ ಬರಿಯ ಗೇಮನ್ನೇ ಆಡುತ್ತಾ ಇರುತ್ತಾರೆ, ಯೂಟ್ಯೂಬಿನಲ್ಲಿ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ನೋಡುತ್ತಾರೆ ಎನ್ನುವ ದೂರು, ಆತಂಕ ಎಲ್ಲಾ ಪಾಲಕರದ್ದೂ ಇರಬಹುದು. ಹೇಳಿದರೆ ಅಷ್ಟು ಸುಲಭಕ್ಕೆ ಮಕ್ಕಳು ಕೇಳುವುದಿಲ್ಲ. ಸ್ವಲ್ಪ ಚಿಕ್ಕ ಮಕ್ಕಳು ಅತ್ತು ಕರೆದು ರಂಪ ಮಾಡಿದರೆ ಹದಿ ಹರೆಯಕ್ಕೆ ತಲುಪಿದ ಮಕ್ಕಳ ಬಳಿ ಮಾತಾಡುವುದೇ ದುಸ್ತರ, ಒಂದು ಮಾತಿಗೆ ಎರಡು ಮಾತು ಆ ಕಡೆಯಿಂದ ಕಿವಿಗೆ ಅಪ್ಪಳಿಸುತ್ತದೆ. ಪಾಲಕರೂ ಒಮ್ಮೊಮ್ಮೆ ಬೇಸತ್ತು ಈ ರಗಳೆಗಳಿಗೆಲ್ಲ ಅಂಜಿ ಎದುರಿಸಲಾರದೆ ಏನಾದರೂ ಮಾಡಿಕೋ ಎನ್ನುತ್ತಾ ಮೊಬೈಲು ಕೈಗಿಟ್ಟು  ಮಾಡಲು ಬೇಕಾದಷ್ಟು ಕೆಲಸವಿರುವಾಗ ಅದರೊಳಗೆ ತೂರಿ ಕೊಳ್ಳುತ್ತಾರೆ. ಮತ್ತದೇ ಬೇಸರ ಶುರುವಿಟ್ಟುಕೊಳ್ಳುತ್ತದೆ, ಮಗು ಯಾವಾಗಲೂ ಮೊಬೈಲ್ ನೋಡುತ್ತದೆ ಎನ್ನುವುದು. 

ಯಾಕೆ ಹೀಗೆ ಆಗುತ್ತದೆ?

ಪಾಲಕರ ಉದ್ದೇಶ ಸರಿ ಇದ್ದರೂ ಕೂಡ ಅವರು ಅನುಸರಿಸುವ ಮಾರ್ಗ ಅಷ್ಟು ಸಮಂಜಸ ಆಗಿರುವುದಿಲ್ಲ, ಸಾಮಾನ್ಯವಾಗಿ ಪಾಲಕರು ಏನು ಮಾಡುತ್ತಾರೆ?  ಮಗುವಿನ ಮುಂದೆ 'ಬೇಡಿಕೆ' ಇಡಬಹುದು, ಆಸಕ್ತಿಯ ತುತ್ತ ತುದಿಯಲ್ಲಿ ಮುಳುಗಿದ ಮಗು ಕಿವಿಗೆ ಹಾಕಿ ಕೊಳ್ಳುವುದಿಲ್ಲ.  ಗದರುವಿಕೆ ಕಿರುಚುವುದು, ಬೈಯುವಿಕೆಯಿಂದ ಪ್ರಯೋಜನವಿಲ್ಲ ನಮ್ಮ ಅಸಹಾಯಕತೆ ಮತ್ತು ಬಲಹೀನತೆಯನ್ನು  ಸೂಚಿಸುತ್ತದೆ. ಮಗುವಿನಲ್ಲಿ ಆಕ್ರೋಶ ಭಾವವನ್ನು ಹುಟ್ಟು ಹಾಕುತ್ತದೆ.  ಮತ್ತು ಕೆಲವೊಮ್ಮೆ ಮಗುವು ತಾನಾಗಿಯೇ ತಿಳಿದುಕೊಳ್ಳಬೇಕು ಎಂದು ಪಾಲಕರು ಅಂದುಕೊಳ್ಳುತ್ತಾರೆ ಇಲ್ಲ ಇದು ವರ್ಕ್ ಔಟ್ ಆಗದು ಸಾಮಾನ್ಯವಾಗಿ ಯಾವ ಅಭ್ಯಾಸಗಳಿಗೂ ಇದು ಯಶಸ್ವಿಯಾಗದು. 


ಮೊಬೈಲು ಟ್ಯಾಬ್ಗಳನ್ನು ಮಕ್ಕಳಿಗೆ ಕೊಡಲೇ ಬಾರದೆ?

ಎಲ್ಲವಕ್ಕೂ ತಂತ್ರಜ್ಞಾನವನ್ನೇ ಬಳಸಿಕೊಳ್ಳುವ  ಅಳವಡಿಸಿಕೊಂಡಿರುವ ನಾವು ಮಕ್ಕಳನ್ನು ಮಾತ್ರ ಅದರಿಂದ ಹೊರತುಪಡಿಸಲು ಸಾಧ್ಯವೇ!? ಸಾಧುವೇ!?  ಕಾಲಕ್ಕೆ  ಪರಿಸ್ಥಿತಿಗೆ ತಕ್ಕಂತೆ   ಮಕ್ಕಳಿಗೂ ಅವೆಲ್ಲದರ ಜ್ಞಾನ ಅತ್ಯವಶ್ಯಕ. ಬಳಸಲೇ ಬಾರದು ಎನ್ನುವ ಕಟ್ಟು ನಿಟ್ಟು ಸಲ್ಲ. ಅದರಲ್ಲೂ ಈಗ ಮಕ್ಕಳಿಗೆ ಅದರಲ್ಲಿಯೇ ತರಗತಿಗಳು ನಡೆಯುತ್ತಿವೆಯಾದ್ದರಿಂದ  ಎಲ್ಲರ ಅಂಗೈಯಲ್ಲೂ ಫೋನೋ ಟ್ಯಾಬೋ ಲ್ಯಾಪ್ಟಾಪ್ ಗಳು ಲಭ್ಯವಿದ್ದೇ ಇರುತ್ತದೆ. ಇನ್ನೂ ಮುಖ್ಯ ಎಂದರೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಗೊತ್ತಿದ್ದರೆ ಇವುಗಳು ಪೂರಕವೇ. ಆದರೆ ಸಮಸ್ಯೆ ಇರುವುದು ಅದರ ಮಿತಿಮೀರಿದ ಬಳಕೆಯಲ್ಲಿ.  ಹುಟ್ಟಿ ಆರು ತಿಂಗಳು ಕಳೆದಿರದ ಮಗುವೂ ಮೊಬೈಲಿನ ಎಡೆಗೆ  ಆಕರ್ಷಿತವಾಗುತ್ತದೆ. ಎರಡು ವರ್ಷದ ಮಗುವಿಗೆ ಮೊಬೈಲಿದ್ದರೆ ಮಾತ್ರ ಊಟ ಸೇರುತ್ತದೆ. ನಾಲ್ಕು ವರ್ಷದ ಮಗುವಿಗೆ ಮೊಬೈಲಿನಲ್ಲಿ ಅದರಿಷ್ಟದ ರೈಮ್ಸ್ ಹಾಕಿಕೊಡಲೇ ಬೇಕು. ಅದರ ಮೇಲ್ಪಟ್ಟ ಮಕ್ಕಳು ಗೇಮ್ಸ್,  ಯೂಟ್ಯೂಬ್ ಮತ್ತೊಂದು ಇನ್ನೊಂದು ಅಂತ ನೋಡುತ್ತಲೇ ಇರುತ್ತವೆ. ಮೊನ್ನೆ  ಒಂದು ಮದುವೆ ಮನೆಯಲ್ಲಿ ಕಂಡ ದೃಶ್ಯ ಎಂದರೆ ಹೆಚ್ಚು ಕಡಿಮೆ ವಯಸ್ಸಿನ  ಒಂದು ಎಂಟು ಹತ್ತು ಮಕ್ಕಳು ಪಕ್ಕ ಪಕ್ಕದಲ್ಲಿ ಕುಳಿತು ತಮ್ಮ ಕೈಯಲ್ಲಿದ್ದ ಮೊಬೈಲು ಟ್ಯಾಬಿನಲ್ಲಿ ಮುಳುಗಿ ಹೋಗಿದ್ದರು. ಮೊಬೈಲು ಬೇಕು ನಿಜ ಆದರೆ ಅದರ ಬಳಕೆ ಹೆಚ್ಚಾದರೆ?  ಅನೇಕ ರೀತಿಯ ಅಡ್ಡ ಪರಿಣಾಮಗಳು ಆಗುತ್ತಲೇ ಹೋಗಿಬಿಡುತ್ತದೆ.ಹಾಗಾದರೆ ಮತ್ತೆ ಏನು ಮಾಡಬೇಕು? ಹೇಗೆ ಮಕ್ಕಳನ್ನು ಸ್ಕ್ರೀನ್ ಟೈಮನ್ನು ಮ್ಯಾನೇಜ್ ಮಾಡಬೇಕು? ಕೆಲವಷ್ಟಿದೆ ಸರಳ ಸುಲಭ ವಿದಾನಗಳು. ಪ್ರತಿ ಮಗುವು ಭಿನ್ನ ಅಳವಡಿಸಿಕೊಳ್ಳುವಾಗ ಮಗುವಿನ ವಯಸ್ಸು, ತಿಳುವಳಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕು.


1. ನಿಗದಿತ ಸಮಯ

ಮಕ್ಕಳಿಗೆ ಮೊಬೈಲನ್ನು ನೋಡಲು  ವಯಸ್ಸಿಗೆ ಅನುಗುಣವಾಗಿ ಇಂತಿಷ್ಟೇ ಸಮಯ ಅಂತ ಮೀಸಲಿಡಬೇಕು. ಎಷ್ಟು ಸಮಯ? ಇಂತಿಷ್ಟೇ ಅಂತ ಸಾರಸಾಗಟವಾಗಿ  ಹೇಳುವುದು ಕಷ್ಟ. ಮಗು ಬರೀ ಯೂಟ್ಯೂಬ್ ಅದು ಇದು ನೋಡುತ್ತದೆಯಾದರೆ  45 ನಿಮಿಷ ಹೆಚ್ಚು. ಡಾಕ್ಯುಮೆಂಟರಿಯಾದರೆ 3 ಗಂಟೆ ಬೇಕಾಗುತ್ತದೆ. ಗೇಮ್ಸ್ ಆದರೆ ಇನ್ನೊಂದು ತರಹ. ಹಾಗೆಯೇ ಅವರವರೇ ಎಷ್ಟು  ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಯಾವ ಸಮಯ? ಮಕ್ಕಳು ದೊಡ್ಡವರಿದ್ದರೆ ಅದನ್ನು ಅವರೊಂದಿಗೆ  ಚರ್ಚಿಸಿ ನಿರ್ಧರಿಸಬಹುದು. ಉದಾಹರಣೆಗೆ ಮಗು 12 ವರ್ಷ ಮೇಲ್ಪಟ್ಟಿದ್ದರೆ, ಹೀಗೆ ಹೇಳಬಹುದು, ' ನಿನ್ನ ಸಮಯ ಇಂತಿಷ್ಟು ನಿನಗೆ ಯಾ ಆ ಸಮಯ ಅನೂಕೂಲ? ಅಥವಾ ಇದನ್ನು ವಿಭಾಗಿಸಿಕೊಳ್ಳ ಅಹುದು" ಮಗುವಿಗೆ ಆಲೋಚನೆ ಬದಲಾಗುತ್ತದೆ ತನಗೆ ಕೊಟ್ಟ ಸ್ವಾತಂತ್ರ್ಯ ಖುಷಿ ಪಡು ತ್ತದೆ. ತಾ ಈ ಆಯ್ದುಕೊಂಡ ಸಮಯವಾದದರಿಂದ ಮಗುವಿನಲ್ಲೋ ದು ಭಾಧ್ಯತೆ ಬೆಳೆಯುತ್ತ ದೇ. ಮಗು ಚಿಕ್ಕದಿದ್ದರೆ ನಾವೇ ಒಂದು ಸಮಯವನ್ನು ನಿರ್ಧರಿಸಬೇಕಾಗುತ್ತದೆ. 


2. ಖಂಡಿತ ಪಾಲಿಸಬೇಕು

ಸಮಯ ನಿಗದಿ ಮಾಡಿಕೊಳ್ಳುವುದು ಸುಲಭ  ಆದರೆ ಪಾಲಿಸುವುದಿದೆಯಲ್ಲ ಅಲ್ಲೇ ಪಾಲಕರು ಎಡವುವುದು.  ಯಾವ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯಬಾರದು. ಎಷ್ಟು ಸಮಯವೋ ಅಷ್ಟೇ ಕೊಡಬೇಕು. ಪಾಲಕರ ಜಾಣ್ಮೆ ಹಾಗೂ ತಾಳ್ಮೆ ಇಲ್ಲಿ ಬಹಳ ಮುಖ್ಯ. ಮಗು ಸಮಯವನ್ನು  ವಿಸ್ತರಿಸಲು ತಪ್ಪಿಸಲು ಸಾವಿರ ನೆಪಗಳನ್ನು ಹುಡುಕುತ್ತದೆ. ಅವಕ್ಕೆಲ್ಲಾ ಬಗ್ಗುಬಾರದು ನಿರ್ದಾರದಿಂದ ಹಿಂದೆ ಸರಿಯಬಾರದು. ಉದಾಹರಣೆಗೆ, ಮಗು " ಅಮ್ಮ ಪ್ಲೀಸ್ ಅರ್ಧ ಆಗಿದೆ ಪೂರ್ತಿ ನೋಡಿಕೊಳ್ಳಲಾ ?" ಎನ್ನುತ್ತದೆ ಎಂದುಕೊಳ್ಳಿ ಅದು ನಿಜವೂ ಇರಬಹುದು.  ಹೂ ಎಂದರೆ ಅದನ್ನೇ ಮಗು ಅಭ್ಯಾಸ ಮಾಡಿಕೊಳ್ಳುತ್ತದೆ, ಉಹೂಂ ಎಂದರೆ ನಿಜವಾಗಿಯೂ ಮಗುವು ಆಸಕ್ತಜಿದಾಯಕವಾಗಿ ನೋಡುತ್ತಿದ್ದರೆ ಅದಕ್ಕೆ ನೋಡಿದ ತೃಪ್ತಿ ಸಿಗದೆ ಇರಬಹುದು. ಆಗ ಮಗೂ ಇವತ್ತು ಎಷ್ಟು ಸಮಯ ಹೆಚ್ಚು ನೋಡುತ್ತೀಯೋ ಅಷ್ಟು ಸಮಯ ನಾಳೆ ಕಡಿಮೆ ಮಾಡಿಕೋ ಎಂದು ಮೃದುವಾಗಿ ಆದರೆ ದೃಢವಾಗಿ ಹೇಳಬೇಕು. ನೀವು ಕೇಳಬಹುದು ಇಷ್ಟೆಲ್ಲಾ ಬೇಕೇ ಮಗುವಿಗೆ ಕೊಟ್ಟರೆ ಆಗದೆ? ಇಲ್ಲ ಎಂದೇ ಹೇಳಬೇಕು. ಯಾವುದೇ ನಿಯಮವಿರಲಿ ಅದನ್ನು ಪಾಲಿಸದಿದ್ದರೆ ಅದು ವ್ಯರ್ಥ ಮಗು ಅದನ್ನು ಹಗುರಾವಾಗಿ  ಪರಿಗಣಿಸುತ್ತದೆ. ಮುಂದೆ ಯಾವುದೇ ನಿಯಮಕ್ಕೆ ಮಗು ಜಗ್ಗುವುದೂ ಇಲ್ಲ ಬಗ್ಗುವುದೂ ಇಲ್ಲ.


3. ಅರ್ಥೈಸಬೇಕು

ಮಗುವಿಗೆ ಹಾಗೆ ಮಾಡು ಹೀಗೆ ಮಾಡು ಎನ್ನುವುದಕ್ಕಿಂತ ಅದು ಯಾಕೆ ಎನ್ನುವುದನ್ನು ಸದಾ ಹೇಳಬೇಕು.  ಮಗು ಅದಿಲ್ಲವಾದರೂ ಮಗು ಒಂದು ಒಳ್ಳೆಯ  ಕಾರಣಕ್ಕೆ ಎನ್ನುವುದು ಅರ್ಥ ಮಾಡಿಕೊಳ್ಳುತ್ತದೆ. ಹೇಗೂ ಮಗು ನೋಡಿಕೊಳ್ಳುತ್ತದೆ ಆದಷ್ಟು ಮಗುವಿನ  ಆಸಕ್ತಿಗೆ ಅನುಗುಣವಾಗಿ  ಉಪಯುಕ್ತ ಮತ್ತು ಅವಶ್ಯಕವಾದದ್ದನ್ನು ಪರಿಚಯಿಸುತ್ತಾ ಹೋಗಬೇಕು.

4.  ಬದಲು ಕೊಡಬೇಕು

ಮಕ್ಕಳಿಗೆ ದೈಹಿಕ ಚಟುವಟಿಕೆ  ಅತ್ಯಂತ ಅವಶ್ಯಕ. ಮಗು ತನ್ನೆಲ್ಲಾ ಚಟುವಟಿಕೆಗಳಿಂದ ಹೊರತಾಗಿ ಸ್ಕ್ರೀನ್ ನೋಡುವುದನ್ನು ಯಾವುದೇ ಕಾರಣಕ್ಕೂ ಪ್ರೇರೇಪಿಸಬಾರದು. ದೈಹಿಕ ಚಟುವಟಿಕೆ ಜೊತೆ ಜೊತೆಗೆ ಸ್ಕ್ರೀನ್ ನೋಡುತ್ತಿದೆಯಾದರೆ ಹೆಚ್ಚು ಚಿಂತಿಸಬೇಕಾಗಿಲ್ಲ. 


ಇಷ್ಟೆಲ್ಲಾ ಮಾಡಬೇಕಾ ? 
ಮಾಜಿ


ಮಕ್ಕಳು ಮೊಬೈಲು ಇತ್ಯಾದಿಗಳನ್ನು ನೋಡಬಾರದೆ?

ಇದು ಸಾದ್ಯವೂ ಇಲ್ಲ ಸಾಧುವೂ ಅಲ್ಲ. ಪ್ರತಿಯೊಂದಕ್ಕೂ ಟೆಕ್ನಾಲೊಜಿ ಯನ್ನು ಉಪಯೋಗಿಸುವ ನಾವು ಮಕ್ಕಳನ್ನು ಅದರಿಂದ ದೂರ ಇಡಬೇಕು ಎಂದರೆ ಹೇಗೆ ಸಾಧ್ಯ?

1.