ಎಷ್ಟೋ ದಿನಗಳಿಂದ ಮನಸಿನಲ್ಲಿ ಗೂಡು ಕಟ್ಟಿಕೊಂಡ ಮಾತುಗಳಿಗೆ ಹೊರಬರಲು ಒಮ್ಮೊಮ್ಮೆ ಒಂದು ನೆಪ ಬೇಕಿರತ್ತದೆ.
ಅಪ್ಪನ ಬಗ್ಗೆ ಹಂಚಿಕೊಳ್ಳಲು ಬಂದ ಫಾಥೆರ್ಸ್ ಡೇ ನಂತೆ!
ಮೂರು ವರುಷದ ನನಗೆ ಮೂರು ಗಾಲಿಯ ಸೈಕಲ್ ತಂದು ಕೊಟ್ಟ ನನ್ನ ಅಪ್ಪ..
ಯಾವ ಹೆಣ್ಣು ಮಗುವೂ ಸೈಕಲ್ ತುಳಿಯದ ಊರಿನಲ್ಲಿ ಪ್ರೈಮರಿಯಲ್ಲಿ ನನಗಾಗಿ ಸೈಕಲ್ ಕೊಡಿಸಿದ ನನ್ನ ಅಪ್ಪ..
ಭಾಷಣ ಸ್ಪರ್ಧೆಗೆ ಬಿಳಿ ಹಾಳೆಯಲ್ಲಿ ಭಾಷಣ ಬರೆದುಕೊಡುತ್ತಿದ್ದ ನನ್ನ ಅಪ್ಪ..
ನಾಟಕದ ಸಂಭಾಷಣೆಯನ್ನು ಹೇಳುವ ರೀತಿಯನ್ನು ನನಗೆ ಕಲಿಸಿಕೊಡುತ್ತಿದ್ದ ಅಪ್ಪ...
ನನ್ನ ಜೊತೆ ಕ್ಯಾರೆಮ್ , ಶಟಲ್ ಆಡುತ್ತಿದ್ದ ಅಪ್ಪ ..
ನಾನು ತುಂಬಾ ತುಂಬಾ ಓದಬೇಕೆಂದು ಕನಸು ಹೊತ್ತು ಹೈಸ್ಕೂಲ್ ಗೆ ಬೇರೆ ಊರಿನಲ್ಲಿ ಸೇರಿಸಿದ ನನ್ನ ಅಪ್ಪ.
ನನಗೆ ಸುಜುಕಿ ಬೈಕ್ ನ ತಾನೇ ಸ್ವಂತ ನಿಂತು ಕಲಿಸಿದ ನನ್ನ ಅಪ್ಪ.
ಜೀಪ್ ಡ್ರೈವಿಂಗ್ ಕಲಿಸಿ ಕೀ ಕೈಗೆ ಇಡುತ್ತಿದ್ದ ನನ್ನ ಅಪ್ಪ.
ನನ್ನನ್ನು ಸ್ಕೂಟಿ ಶೋ ರೂಂ ಗೆ ಕರೆದೊಯ್ದು ಬೇಕಾದ್ದು ಆರಿಸಿಕೋ ಅಂದ ನನ್ನ ಅಪ್ಪ.
ಊರಿಗಂತ ಹೊರಟರೆ ಬೆಳಗ್ಗೆ ೫ ಕ್ಕೇ ಎದ್ದು ರೆಡಿಯಾಗಿ ಬಸ್ಸ್ಟ್ಯಾಂಡ್ ಗೆ ೧೦ ನಿಮಿಷ ಮುಂಚೆಯೇ ಕಾರು ತಂದು ಕಾಯುವ ನನ್ನ ಅಪ್ಪ ..
ಮೊನ್ನೆ ಮೊನ್ನೆ ಬಾಣಂತನದಲ್ಲಿ ರಚ್ಚೆ ಹಿಡಿದು ಅಳುತ್ತಿದ ನನ್ನ ಮಗುವನ್ನು ದಿನವೂ ಮಲಗಿಸಿಯೇ ತಾನು ಮಲಗುತ್ತಿದ್ದ ನನ್ನ ಅಪ್ಪ ...
ಭಾವನೆಗಳಿಗೆ, ಯೋಚನೆಗಳಿಗೆ, ಇಷ್ಟಗಳಿಗೆ ಯಾವತ್ತೂ ಬೆಲೆ ಕೊಡುತ್ತಿದ್ದ ನನ್ನ ಅಪ್ಪ..
ಚಿಕ್ಕಂದಿನಿಂದಲೇ ಅಯೈಕೆಯ ಸ್ವಾತಂತ್ರ್ಯವನ್ನು ನನ್ನ ಕೈಗಿತ್ತ ನನ್ನ ಅಪ್ಪ.
ಹೇಳಿದಷ್ಟೂ ಮುಗಿಯದ ಮಾತುಗಳಿವೆ .... , ಆದರೆ ಹೇಳಲೇ ಬೇಕಾದ ಇನ್ನೂ ಒಂದು ಮಾತಿದೆ...
ಗೆಲುವ ಮಕ್ಕಳನ್ನು ದೂರದಿಂದ ನಿಂತು ನೋಡುವುದು , ಅವರಿಗೆ ಸಪ್ಪೊರ್ಟಿವ್ ಆಗಿರೋದು ಸಹಜದ ಸಂತೋಷದ ವಿಷಯ..
ಆದರೆ ಸೋತ ಮಕ್ಕಳು ...?
ಒಂದಷ್ಟು ಕಾಲದ ಮಿತಿಯೊಳಗೆ ಸರತಿಯಲ್ಲಿ ಸೋತ ಮಗು ನಾನು, ಸೋತ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಸೋಲಿಸಲ್ಲಿಲ್ಲ ಅಪ್ಪ !
ಎಂತಹ ದೊಡ್ಡ ಸೋಲನ್ನು ಹೊರಲಾರದೆ ಹೊತ್ತುಕೊಂಡು ಬಂದು ನಿಂತಾಗಲೂ ಆತ್ಮ ವಿಶ್ವಾಸವನ್ನು ಕುಂದಿಸಲಿಲ್ಲ.
ಹಿಂದಿರುಗಿ ನೋಡಿದರೆ ಸೋತ ಸೋಲು ಅಲ್ಲೇ ಬಿದ್ದಿದೆ!ಹಾದಿ ತುಂಬಾ ದೂರ ನಡೆದು ಬಂದಿದೆ.
ನನಗೆ ಹೇಳಬೇಕಾದ್ದೂ ಇದೇ, ಮಕ್ಕಳ ಚಿಕ್ಕ ಪುಟ್ಟ ಸೋಲುಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಕುಂದಿಸಬಾರದು, ಧೈರ್ಯವನ್ನು ಕೆಡಿಸಬಾರದು , ಸ್ವಲ್ಪ ಕೈ ಚಾಚಿದರೆ ಮತ್ತೆ ಚಿಗಿತು ಎದ್ದು ಮುಂದೆ ನಡೆಯಬಲ್ಲವು ನಮ್ಮ ಮಕ್ಕಳು, ನಾವು ಕೈ ಚಾಚಬೇಕಷ್ಟೇ !
ಹಾಗೆ ಚಾಚಿದ ಎಷ್ಟೋ ಕೈಗಳ ಅಪ್ಪಂದಿರಿಗೆ ಹ್ಯಾಪಿ ಫಾಥೆರ್ಸ್ ಡೇ . ಅವರು ನೆಟ್ಟ ಆತ್ಮ ವಿಶ್ವಾಸದ ಬಳ್ಳಿಗೆ, ಕೊಟ್ಟ ಧೈರ್ಯಕ್ಕೆ , ಇಟ್ಟ ಪ್ರೀತಿಗೆ ಚೀಯರ್ಸ್ ........
ಮೇಡಂ, ಮನ ಮಿಡಿಯುವ ಬರಹ.
ReplyDelete’ಅಪ್ಪ ಎಂದರೆ ಆಕಾಶ’
ಧನ್ಯವಾದಗಳು ಭದ್ರಿ ಸರ್ ... ನಿಜವಾಗಿಯೂ ಅಪ್ಪ ಅಂದ್ರೆ ಆಕಾಶ .....
DeleteSuper....full odak aagilla....cos I've lost my ಆಕಾಶ last year...:( love u pappa
Deleteohh!!!! I am sorryyy......, Pradeep mascarenhas
Deleteಚೆಂದದ ಬರಹ ಚೈತ್ರ , ಇಂತಹ ಅಪ್ಪಂದಿರು ಎಲ್ಲರಿಗೂ ಸಿಗಲಿ.
ReplyDeleteಮಕ್ಕಳ ಚಿಕ್ಕ ಪುಟ್ಟ ಸೋಲುಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಕುಂದಿಸಬಾರದು ., ಧೈರ್ಯವನ್ನು ಕೆಡಿಸಬಾರದು ...... ಸ್ವಲ್ಪ ಕೈ ಚಾಚಿದರೆ ಮತ್ತ್ತೆ ಚಿಗಿತು ಎದ್ದು ಮುಂದೆ ನಡೆಯಬಲ್ಲವು ನಮ್ಮ ಮಕ್ಕಳು ..., ನಾವು ಕೈ ಚಾಚಬೇಕಷ್ಟೇ ...
ಈ ಸಾಲುಗಳು ತುಂಬಾ ಇಷ್ಟವಾದವು .
ಥ್ಯಾಂಕ್ಸ್ ....ನಿಜಕ್ಕೂ ಅಂತ ಅಪ್ಪ ಎಲ್ಲ ಮನೆಯಲ್ಲಿ ಇರಬೇಕು , ಮೊದಲಿನಿದಲೂ ಎಷ್ಟು ಪ್ರೋತ್ಸಾಹಿಸುತ್ತಿದ್ದೀ ಸುಮಕ್ಕ... , ನಿನ್ನ ಪ್ರೋತ್ಸಾಹ , ಅಭಿಪ್ರಾಯ ಎರಡೂ ನಂಗೆ ಸ್ಪೂರ್ತಿ ... ಮತ್ತು ಅಮೋಲ್ಯ... ,
Deleteಅಪ್ಪ ಲೇಖನ ಉತ್ತಮವಾಗಿದೆ.
ReplyDeletehttp://spn3187.blogspot.in/
http://spn3187.blogspot.in/
Thank u shivakumar nigimani......
ReplyDeleteಅಪ್ಪನ ಬಗೆಗಿನ ಲೇಖನ ಇಷ್ಟವಾಯಿತು.
ReplyDeleteThank you...
ReplyDeleteEe lekhana tumba ishta aaytu. Nanna dourbhagyaveno gottilla naanu ee yavude sukha santoshavanna anubhavisalilla. Aa devarige nanna tandeya kalaji bekagitto eno. Bahubega karedukonda. I miss my dad. :(
ReplyDeleteMecchikondidakke thanks vijaykumaravare, very sorry for you..., but nnevu inta sukhadida vanchitaradare enaayitu.., inta santhoshavannu kodabahudalla munde..., padeyivudakinta neediva santosha innoo hechchu...
Deletehmm nanna bhavanegalige spandisiddakke dhanyavadagalu, nimma uttara manasige samadhan tanditu.. naanu tandeyannu miss madikondaru, nanna taayiya preetige/kalajige abhaariyagiddene.:)
Deleteಚೈತ್ರಾ ಅವರೆ, ನಿಮ್ಮ ಲೇಖನ ಅಪ್ಪ ತುಂಬಾ ಚೆನ್ನಾಗಿದೆ,ಮನಸ್ಸಿಗೆ ತಾಕುವಂತಹದ್ದು.
ReplyDeleteNimma abhiprayakke , mechchugege dhanyavaadagalu veda hebbar ravare
DeleteThank you so... much
ReplyDeletearthapoornavaada lekhana
ReplyDelete