ಒಂದೇ ವ್ಯಕ್ತಿ ಒಂದೇ ವಿಷಯವನ್ನು, ಬೇರೆ ಬೇರೆ ದ್ರಷ್ಟಿಕೋನದಿಂದ ನೋಡಲು ಸಾದ್ಯಾನ ?
ಹಾಗಂದ್ರೇನು ? ನೋಡೋಣ ಬನ್ನಿ .....!
ಶಾರದಮ್ಮ :- ಏನ್ರಿ ಗಿರಿಜಮ್ಮ ಚೆನ್ನಾಗಿದ್ದೀರ ?
ಗಿರಿಜಮ್ಮ :- ಏನ್ ಚೆಂದ ಬಂತುರೀ .. ಏನೋ ಇದೀನಿ ..
ಶಾರದಮ್ಮ :- ಯಾಕ್ರೀ ಹಾಗಂತೀರಾ ...ಹೊಸ ಸೊಸೆ ಬಂದಿದಾಳೆ .... ಏನ್ ಕತೆ? ಹೇಗಿರಬೇಕು ನೀವು ..?
ಗಿರಿಜಮ್ಮ :- ಅಯ್ಯೋ ಬಿಡ್ರಿ ಅದೇನ್ ಕೇಳ್ತೀರಾ ..., ಹೆಸರಿಗೆ ಸೊಸೆ ಕಣ್ರೀ ಎಲ್ಲ ಕೆಲಸಾನೂ ನಾನೇ ಮಾಡಬೇಕು
ಶಾರದಮ್ಮ :- ಅಯ್ಯೋ ಹೌದೇನ್ರಿ ..?
ಗಿರಿಜಮ್ಮ :- ಹೌದು ಕಣ್ರೀ , ಅದೇನ್ ಅವ್ರ ಅಪ್ಪ ಅಮ್ಮ ಏನೂ ಕಲ್ಸಿಕೊಟ್ಟಿಲ್ಲ ಕಣ್ರೀ ..., ಹುಡುಗಿ ಹಾಗೆ .ಓಡಾಡ್ಕೊಂಡು ಇರತ್ತೆ , ಎಲ್ಲದಕ್ಕೂ ನಾನೇ ಸಾಯಿಬೆಕೂ ..., ನಮ್ ಕಾಲದಲ್ಲಿ ಹಿಗಿತ್ತೆನ್ರೀ ಕೆಲಸಕಾರ್ಯ ಹಾಡು ಹಸೆ ಎಲ್ಲ ಬರ್ಬೇಕಿತ್ತು ಅಲ್ವೇನ್ರೀ ..
ಶಾರದಮ್ಮ :- ಹೌದ್ರೀ....
ಗಿರಿಜಮ್ಮ :- ಅಲ್ಲಾ ... ಅತ್ತೆ ಅಂದ್ರೆ ಏನ್ ಗೌರವ .. ಮರ್ಯಾದೆ , ನನ್ನ ಸೊಸೆಗೆ ನನ್ ಕಂಡ್ರೆ ಒಂಚೂರೂ ಗೌರವನೆ
ಇಲ್ಲಾರೀ ..
ಶಾರದಮ್ಮ :- ಹೌದೇನ್ರೀ .....?
ಗಿರಿಜಮ್ಮ :- ಹುನ್ ರೀ ಅದೇನು ಬಟ್ಟೆ ..ಏನು ಪ್ಯಾಷನ್ನು , ಅಲ್ಲಾರೀ ಕೂದಲನ್ನು ಉದ್ದ ಗಿಡ್ಡ ಕತ್ತರಿಸಿಕೊಳ್ಳೋದು
ಯಾವ್ ಪ್ಯಾಶನರೀ ...., ಚೀ .., ಆ ವೇಷ ನೋಡಕ್ಕಾಗಲ್ಲರೀ ....
ಶಾರದಮ್ಮ :- ನಿಮ್ ಮಗ ಏನೂ ಅನ್ನಲ್ವೇನ್ರೀ .....
ಗಿರಿಜಮ್ಮ :- ಇಲ್ಲಾ ಕಣ್ರೀ ..,ಅವ್ನು ಹೆಂಡ್ತಿ ಹೇಳಿದಾಗೆ ಕುಣಿತಾನೆ ಕಣ್ರೀ ...,
- ಚಿಕ್ಕವನಿದ್ದಾಗ ನಾನ್ ಹೇಳಿದ್ದ ಮಾತೆ ಕೇಳ್ತಾ ಇದ್ದ ..., ಈಗ ನೋಡ್ರೀ
ಕಾಲ ಕೆಟ್ಟಬಿಡ್ತು ಕಣ್ರೀ ......
ಶಾರದಮ್ಮ :- ಹಮ್ಮ್ ....ಅಂದ ಹಾಗೇ ನಿಮ್ ಮಗಳು ಇವತ್ತು ಬರ್ತಾಳೆ ಅಲ್ವೇನ್ರೀ ...., ಅವ್ಳಿಗೆ ಈ
ಹೂ ಕೊಟ್ಟಬಿಡ್ರೀ ...
ಗಿರಿಜಮ್ಮ :- ಅಯ್ಯೋ .. ನಮ್ ಮಗುಗಾ ..? ಅವ್ಳಿದ್ದು ಬಾಬ್ ಕಣ್ರೀ .ಅವ್ಳು ಹೂವು ಗೀವು ಮುಡ್ಕೊಳಲ್ಲ . ಪಾಪ .., ಈಗಿನ್ ಕಾಲದ ಹುಡುಗ್ರು ನೋಡಿ ....
.
ಶಾರದಮ್ಮ ಅದೂ ಹೌದು ಬಿಡಿ ..., ಹೇಗೂ ನಿಮ್ ಮಗಳು ಬರ್ತಿದಾಳೆ , ನಾಳೆ ನಿಮ್ ಅಡಿಗೆಗೆ
ಒಂದಿಷ್ಟು ಸಹಾಯವಾಗುತ್ತೆ ....
ಗಿರಿಜಮ್ಮ :- ಅಯ್ಯೋ .... ಪಾಪ ಆ ಮಗು ಏನ್ ಮಾಡತ್ತೆ ...? ಅದಕೊಂದು ಕಾಪಿ ಮಾಡೋಕೂ ಬರಲ್ಲಾರೀ ....
ಓದೋ ಮಗುಗೆ ಯಾಕ ತೊಂದ್ರೆ ಅಂತ ಅದನ್ನೆಲ್ಲ ನಾನೇ ಮಾಡ್ತಾ ಇದ್ದೇರೀ , ಈಗ್ಲೂ ಅಷ್ಟೇ
ಮಗು ಕೆಲಸಕ್ಕೆ ಹೋಗ್ಬರೋಷ್ಟರಲ್ಲಿ ಸುಸ್ತ್ಹಾಗಿರತ್ತೆ ಅಂತ ಎಲ್ಲ ಅವರತ್ತೇನೆ ಮಾಡ್ತಾರೆ ...
ಶಾರದಮ್ಮ :- ಅದೂ ಸರಿ ಬಿಡಿ..ನಾಳೆ ನಿಮ್ಮ ಅಳಿಯನೂ ಬರ್ತಾ ಇದಾನೆನ್ರಿ ?
ಗಿರಿಜಮ್ಮ :- ಹೌದ್ರೀ .., ಎಂತ ಒಳ್ಳೆ ಅಳಿಯ ಅಂತೀರಿ! ನಮ್ ಮಗಳ ಯಾವ ಮಾತಿಗೂ ಇಲ್ಲ ಅನ್ನಲ್ಲಾರೀ ...., ಇಬ್ರೂ
ಎಷ್ಟು ಚೆನ್ನಾಗಿ ಹೊಂದುಕೊಂಡು ಇದಾರೆರೀ ...
ಶಾರದಮ್ಮ :- ಒಳ್ಳೇದು ಬಿಡ್ರೀ .., ಬರ್ತೀನ್ರೀ .........
ಇದು ಅತ್ತೆಯಂದಿರಿಗೆ ಮಾತ್ರ ಸೀಮಿತ ಅಲ್ಲ .., ನಿರೂಪಿಸಲು ವಿನೋದಾಥ್ಮಕ ಎಳೆ ಅಷ್ಟೇ ...,
ಒಂದೇ ಸಂಗತಿಯಲ್ಲಿನ ವಿಭಿನ್ನ ದೃಷ್ಟಿಕೋನಕ್ಕೆ .. ಮತ್ತೊಂದಿಷ್ಟು ವಿಷಯಗಳು:-
## ##
ಹುಡುಗಿ ತುಂಬಾ ಚೆಲ್ಲು .. ಹುಡುಗಿ ಸೋಶಿಯಲ್
ಮಾತು ಕಡಿಮೆ, ಜಂಬ ಹುಡುಗಿ ಗಂಬೀರ
ತುಂಬಾ ನಿದಾನಿ ತುಂಬಾ ಸಮಾದಾನಿ
ಆಕೆಗೆ ಗಡಿಬಿಡಿ ತುಂಬಾ ಚುರುಕು
ಓದೋದು ಬಿಟ್ಟು ಬೇರೆ ಪ್ರಪಂಚಾನೇ ಗೊತ್ತಿಲ್ಲ ಓದಲು ತುಂಬಾ ಜಾಣೆ
ಆತ ನಿಷ್ಟುರಿ ಆತ ತುಂಬಾ ನೇರ
ಕೊರೆತ .., ಮಾತು ಜಾಸ್ತಿ ಒಳ್ಳೆ ವಾಗ್ಮಿ
ಸಹಜ ಅನ್ಸತ್ತೆ ಅಲ್ವ ..! ಟೇಕ್ ಇಟ್ ಈಸೀ ಬಿಡ್ರೀ ...
ಚೈತ್ರ .ಬಿ .ಜಿ . ಕಾನುಗೋಡು
Avaravara bavakke.. avaravara bakuthige.. gud article..
ReplyDeletehamm.. loko binna ruchihi.. thank u..
ReplyDeletechaitrakka idu 100% reality iddu idrall.sosena kala kelage nodoru ade reethi swabavada magalanna hegala mele kurskandu merisodu idu jagattinalli irode.magaligondu nyaya ,sosegondu nyaya,vinodathmaka rasamaya prathykshike idu.chanag baindu.
ReplyDeleteThanks naagabhooshana ..,adu nija mattu swalpa sahaja...anastu..
Deleteನಿಜ ಚೈತ್ರ ...ಕೆಲವರಿಗೆ ತಮ್ಮದಾದರೆ ಎಲ್ಲ ಸರಿ ಬೇರೆಯವರದಾದರೆ ಎಲ್ಲ ತಪ್ಪು...ಇಂತಹ ಮನಸ್ಥಿತಿ ಬದಲಾಗುವುದೆಂದೋ
ReplyDeletehoudu sumakka..
Deleteನಿತ್ಯದ ಮಾತುಗಳು ಸಮಯಕ್ಕೆ ಅದಲು ಬದಲು ... ಮತ್ತೊಂದಿಷ್ಟು ಸೇರಿದರೆ ಒಂದು ಧಾರಾವಾಹಿಯ ಕಥೆಯಂತೆ .... :)
ReplyDeleteನಿಜ ನಿಮ್ಮ ಮಾತುಗಳು ..., ದನ್ಯವಾದಗಳು
Delete