Wednesday, January 14, 2015

ಒಂದು ಮುಗುಳ್ನಗುವಿನಲ್ಲಿ ...!





         
            
ನಾಲ್ಕು ವರ್ಷಗಳ ಹಿಂದೆ ..


ಅವತ್ತು ಸಂಜೆ ಆರಕ್ಕೆಲ್ಲ ಹನಿ ಮಳೆ ಶುರುವಿಟ್ಟಿತ್ತು.  ನಾನು ಬೆಂಗಳೂರಿಂದ ನಿಟ್ಟೂರಿಗೆ ಹೊರಟಿದ್ದೆ.  ನಾನು ಹೊರಡಲಿರುವ ಬಸ್ ಶೇಷಾದ್ರಿಪುರಂ ಮತ್ತು ಬನಶಂಕರಿ ಎರಡು ಬೋರ್ಡಿಂಗ್ ಪಾಯಿಂಟ್ ಇತ್ತು.  ನಮ್ಮ ಮನೆಗೆ ಬನಶಂಕರಿ ಹತ್ತಿರ ಮತ್ತು ಒಂದೇ ಬಸ್ ಆಗಿದ್ದರಿಂದ ನಾನು ಬನಶಂಕರಿ ಸ್ಟಾಂಡನ್ನೇ ಆಯಿಕೆ ಮಾಡಿದ್ದೆ. ಆರಕ್ಕೆ ಮಾರತ್ಹಳ್ಳಿಯಲ್ಲಿ ವೋಲ್ವೋ ಬಸ್ ಹತ್ತಿದ ನನಗೆ  8.30ಕ್ಕೆ ಬನಶಂಕರಿ ತಲುಪಿದ್ದರೂ ಸಾಕಾಗಿತ್ತು.  ಒಂದು ಕೈಯಲ್ಲಿ ದೊಡ್ಡ ಬ್ಯಾಗ್  ಮತ್ತು ಇನ್ನೊಂದು ಕೈಯಲ್ಲಿ ನನ್ನ  3 ವರ್ಷದ ಪುಟ್ಟ ಮಗಳು.  ಬಸ್ಸು ಹತ್ತಿದ್ದ ಹಾಗೆಯೇ ಇದ್ದಕ್ಕಿಂದ್ದಂತೆ ಮಳೆ ತುಂಬಾ ಜೋರೆ ಆಯಿತು.  ಎಷ್ಟು ಟ್ರಾಫಿಕ್ ಅಂದ್ರೆ  ಬೆಳಂದೂರ್ ದಾಟೋದು 8 ಆಯಿತು.  ನಂಗೆ ಕ್ಷಣ ಕ್ಷಣಕ್ಕೋ ಟೆನ್ಶನ್, ಏನ್ ಮಾಡೋದು? 8.30 ರ  ಒಳಗೆ ಬನಶಂಕರಿ    ಮುಟ್ಟುವ ಯಾವ ಸಾಧ್ಯತೆಯೂ ಇರಲ್ಲಿಲ್ಲ.  ತಕ್ಷಣ ನನ್ನ ಪ್ಲಾನ್ ಚೇಂಜ್  ಮಾಡಿ ಸಿಲ್ಕ್ ಬೋರ್ಡಲ್ಲಿ ಇಳಿದು ಅಲ್ಲಿಂದ ಆಟೋ ತಗೊಂಡು ಶೇಷಾದ್ರಿಪುರಂ ಗೆ ಹೋಗೋ ಯೋಚನೆ ಮಾಡಿದೆ.
ನನ್ನ  ಟೆನ್ಶನ್, ಕೈಯಲ್ಲಿ ದೊಡ್ಡ ಬ್ಯಾಗ್, ಜೊತೆಯಲಿ ಪುಟ್ಟ ಮಗು, ಅದರ ಅಳು, ನಗು ಜೊತೆಗೆ ನೂರು ಪ್ರಶ್ನೆಗಳು.   ಅಂತೂ ನಾನು ಇನ್ನೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ ಎನ್ನುವ ವಿಷಯ ಕಂಡಕ್ಟರ್, ಡ್ರೈವರ್ ಮತ್ತು ಅಲ್ಲಿರುವ  3-4 ಜನಕ್ಕೆ ಗೊತ್ತಾಗಿ ಹೋಯಿತು.  ಒಬ್ಬರು ಮದ್ಯ ವಯಸ್ಸಿನ ಮಹಿಳೆ ಅವರು  ಯಾವೊದೋ IT ಕಂಪನಿಯ ಮ್ಯಾನೇಜರ್ ಇರಬಹುದು ಏನ್ನುವುದು  ನನ್ನ ಅನಿಸಿಕೆ ..., ಮೇಲಿಂದ ಮೇಲೆ ನೆರವಾದ ಪ್ರಶ್ನೆಗಳನ್ನು ಕೇಳೋದಿಕ್ಕೆ ಶುರುವಿಟ್ಟುಕೊಂಡರು ಯಾಕೆ ಒಬ್ಬಳೇ ಬಂದಿದ್ದು,  ಯಾಕೆ ಈ ದಾರಿ etc , etc ..., ಉತ್ತರಿಸುವ ಅಗತ್ಯ ತಾಳ್ಮೆ ಎರಡೂ ನನ್ನಲ್ಲಿರಲ್ಲಿಲ್ಲ.  ಏನೋ ಸ್ವಲ್ಪ ನಿರಾಸಕ್ತಿಯಿಂದ ಚುಟುಕಾಗಿ ಉತ್ತರಿಸುತ್ತಿದ್ದೆ, ಆಕೆ ಬನಶಂಕರಿಗೆ ಟಿಕೆಟ್ ಕೊಂಡಿದ್ದು ನಂಗೆ ಗೊತ್ತಿತ್ತು.
ಸಿಲ್ಕ್ ಬೋರ್ಡ್ ಬರ್ತಿದ್ದ ಹಾಗೇ  ಆಕೆ ನನ್ನ ಬ್ಯಾಗ್ ಗೆ ಥಟ್ ಅಂತ ಕೈ ಹಾಕಿದ್ದರು. ತಮ್ಮದೆನ್ನುವಂತೆ ಸುಲಭವಾಗಿ ಕಾಳಜಿಯಿಂದ ಹೆಗಲಿಗೇರಿಸಿಕೊಂಡು ಇಳಿದುಬಿಟ್ಟರು, ನಾನು ಸವಾರಿಸಿಕೊಳ್ಳುತ್ತ ಇಳಿದೆ, ಸಿಲ್ಕ್ ಬೋರ್ಡ್ ಜಂಕ್ಷನ್ ಅದು  6 ರೋಡ್ ಸೇರುವ ಜಾಗ, ನನ್ನ ಅಂಗೈಯನ್ನು ತಮ್ಮ ಬೆಚ್ಚನೆ ಅಂಗೈಯಲ್ಲಿ ಗಟ್ಟಿಯಾಗಿ ಹಿಡಿದು ರೋಡ್ ಕ್ರಾಸ್ ಮಾಡೇ ಬಿಟ್ಟರು , ಮತ್ತು ನನ್ನನ್ನು ಆಟೋ ಸ್ಟಾಂಡಿಗೆ ಬಿಟ್ಟು, ಇದು ತಮ್ಮ ಕೆಲಸವೇನೋ ಅನ್ನುವಷ್ಟು ಸಹಜವಾಗಿ ಮತ್ತೆ ಅದೇ ಓಡು ನಡಿಗೆಯಲ್ಲಿ ನಡೆದೇ ಬಿಟ್ಟರು, ನಂಗೆ ಅವರ ಹೆಸರು ಕಾಂಟ್ಯಾಕ್ಟ್ ನಂಬರ್ ಕೂಡ ತೆಗೆದುಕೊಳ್ಳಲು ಸಮಯವಿರಲ್ಲಿಲ್ಲ !
ಅವತ್ತು ಅವರಷ್ಟೇ ಅಲ್ಲ , ನನ್ನ ಪಾಲಿಗೆ ಅಲ್ಲಿಂದ ಎಲ್ಲವೂ ನೆನಪನ್ನು ಸುಂದರವಾಗಿಸುವಂತಹ ಘಟನೆಗಳೇ! ಒಂದೇ ಒಂದು ಆಟೋನೂ ಬರಲ್ಲಿಲ್ಲ, ಬಂದ ಆಟೋ ಖಾಲಿ ಇಲ್ಲ,  ಖಾಲಿ ಆಟೋ  ಶೇಷಾದ್ರಿಪುರಂಗೆ ಬರಲು ಒಪ್ಪುತ್ತಿಲ್ಲ, ಕೊನೆಗೂ ಒಂದು ಆಟೋ ನಿಲ್ಲಿಸಿದ ಖುಷಿಗೆ ಓಡಿದಾಗ ಅದು ನಿಲ್ಲಿಸಿದ್ದು ನನಗಾಗಿ ಅಲ್ಲ, ನನಗಿಂತ ಕ್ಷಣ ಮುಂಚೆ ಒಂದಿಬ್ಬರು ಭುರ್ಖ  ಹಾಕಿದ ಹೆಂಗಸರು ಜೊತೆಗೊಬ್ಬ ಗಂಡಸು,   ಓಹ್ ಈ ಆಟೋ ಸಿಗದ್ದಿದ್ದರೆ ನಾನು ಬಸ್ ತಲುಪುವುದು ಸಾದ್ಯವೆ ಇರಲಿಲ್ಲ. ತಕ್ಷಣ ಅವರಿಗೆ ವಿಷಯ ವಿವರಿಸಿದೆ, 'ನಂಗೆ ಮತ್ತೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ. ನಾನು ಹೊಗಲಾ ನಿಮ್ಮ ಅಭ್ಯಂತರವಿಲ್ಲದಿದ್ದರೆ?'  ಅಂದೆ, ಏನೋ ಮಾತಾಡಿಕೊಂಡು ಅವರು ಅವರು ಹಿಡಿದ ಆಟೋವನ್ನು ನನಗೆ ಬಿಟ್ಟಿದ್ದರು !! ಏನಿತ್ತೋ ಅವರ ಅವಶ್ಯಕತೆ!?  ಎಲ್ಲರಿಗೂ ಅವರವರ ಅವಶ್ಯಕತೆ ಅಷ್ಟೇ ಮುಖ್ಯ !
ಆಟೋ ಹತ್ತಿ ಕುಳಿತಾಗಿತ್ತು, ದುಡ್ಡು ಮಾತಾಡಿರಲ್ಲಿಲ್ಲ, ನನ್ನ ತೀರ ಅವಶ್ಯಕತೆ ಆಟೋವಾಲನಿಗೆ ಗೊತ್ತಾಗಿಬಿಟ್ಟಿತ್ತು, ಮಳೆ ಬೇರೆ, ರಾತ್ರಿ ಬೇರೆ, ಅವನು ಎಷ್ಟು ದುಡ್ಡು ಬೇಕಾದರೂ ಕೇಳುವ ಎಲ್ಲಾ ಸಾಧ್ಯತೆಯೂ ಇತ್ತು, ನನಗೆ ಕೊಡಲು ಕಾರಣವೂ ಇತ್ತು ಮತ್ತು ಬೇರೆ ಆಯಿಕೆ ನನ್ನಲ್ಲಿರಲಿಲ್ಲ. ಮತ್ತೆ ನನಗೆ ಟೆನ್ಶನ್, ಬಸ್ಸಿನ ಟೈಮ್ ಹೇಳಿ ತಲೋಪಾಗುತ್ತ ಅಂತ ಮದ್ಯ ಮದ್ಯ ಕೇಳುತ್ತಿದ್ದೆ , ಅವನು ತನಗೇ ಬಸ್ ತಪ್ಪಿ ಹೋಗುತ್ತೇನೋ ಅನ್ನುವಷ್ಟು ಕಾಳಜಿಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದ .., ಫೈನಲಿ ಐ ರೀಚಡ್ ! ಅಂಡ್ ಬಸ್ ಕೂಡ ಹೊರಟಿರಲ್ಲಿಲ್ಲ, ಹೊರಡುವುದರಲ್ಲಿತ್ತು. ಏನಪ್ಪಾ ಇವನು ಎಷ್ಟು ಕೇಳುತ್ತಾನೆ ಎಂದುಕೊಂಡು  'ಎಷ್ಟಾಯಿತು ?' ಕೇಳಿದರೆ ಅವನು ಆ ಮಳೆಯಲ್ಲಿ, ಆ ರಾತ್ರಿಯಲ್ಲೂ ಮೀಟರ್ ಹಾಕಿದ್ದ, ನನಗಿದ್ದ ಟೆನ್ಷನ್ನಿಗೆ ನಾನು ಗಮನಿಸಿರಲ್ಲಿಲ್ಲ, ಮೀಟರಗಿಂತ  ಸ್ವಲ್ಪ ಜಾಸ್ತಿ ಕೊಡದೇ ಇರಲು ನನಗೆ ಸಾದ್ಯವೇ ಇರಲ್ಲಿಲ್ಲ. ಒಳ್ಳೆಯದನ್ನು ಯಾವ ರೀತಿಯಿಂದಾದರೂ ಪ್ರೋತ್ಸಾಹಿಸಬೇಕು ಮತ್ತದು ಸಾಂಕ್ರಮಿಕವಾಗುತ್ತದೆ ಎನ್ನುವ ಬಲವಾದ ನಂಬಿಕೆ ನನ್ನದು. ಆಟೋ ನಿಲ್ಲಿಸಿ,ಇಳಿದು ನನ್ನ ದೊಡ್ಡ ಬ್ಯಾಗನ್ನು ರೋಡ್ ಕ್ರಾಸ್ ಮಾಡಿಸಿ ತಂದು ಕೊಟ್ಟ. ಬಸ್ ಹತ್ತಿ ಕುಳಿತು ಹಾಗೇ ಒಮ್ಮೆ ಕಣ್ ಮುಚ್ಚಿದೆ.  ಬಸ್ ಸಿಕ್ಕಿದ ಖುಷಿಗೆ ಮುಗುಳ್ನಗುವೊಂದು ತುಟಿಯ ಮೇಲೆ ಬಂದು ಕುಳಿತಿತ್ತು.
ಬಹುಶಃ ನಂಗೆ ಅವತ್ತು ಬಸ್ ಸಿಗದಿದ್ದರೆ ಏನೂ ಆಗುತ್ತಿರಲ್ಲಿಲ್ಲ, ವಾಪಾಸ್ ಮನೆಗೆ ಬರುತ್ತಿದ್ದೆ ಅಷ್ಟೇ !! ನಂಗೆ ಅದು ಅಷ್ಟು ಮುಖ್ಯವೂ  ಅಲ್ಲ, ಅಥವ ಸೀದಾ ಬಸ್ ಸಿಕ್ಕಿದ್ದರೂ ನಾನೊಂದಿಷ್ಟು ಒಳ್ಳೆಯ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದೆ. ಆದರೆ ಅವತ್ತಿನ ನನ್ನ ಅನುಭವ ನನ್ನನ್ನು ಮತ್ತಷ್ಟು ಶ್ರೀಮಂತವಾಗಿಸಿದೆ.
ಸಿಹಿ ಅನುಭವಗಳು ಸುಂದರವಾಗಿ ಕುಳಿತಿವೆ ಸಾಕಷ್ಟು!  ನನ್ನ ಹಿರೊಯಿನ್ನನಂತ ಸ್ಕೂಟಿಯನ್ನು ಪಾರ್ಕ್ ಮಾಡಿ ಹೋಗಿರುತ್ತೇನೆ, ಹಿಂದುರುಗಿ ಬಂದು ನೋಡಿದರೆ ಅದರ ಹಿಂದೊಂದು ಗಡವನಂತ ಬೈಕ್ ಬಂದು ನಿಂತುಕೊಂಡಿರುತ್ತದೆ, ನಾನು ಮಾಡೋದಾದರೂ ಏನು? ಎತ್ತಿಡಲೂ ಆಗದೆ ಸುಮ್ಮನಿರಲೂ ಆಗದೆ ಪೆಚಾಡುವಾಗ ಯಾರೋ ಸಹಾಯಕ್ಕಿಳಿಯುತ್ತಾರೆ. ಅಂಗಡಿಯಲ್ಲಿ ಮರೆತ ಪರ್ಸನ್ನು ಅಂಗಡಿಯಾತ ನೆನಪಿಸುತ್ತಾನೆ.  ಸೆಕ್ಯೂರಿಟಿಯ ಕರ್ತವ್ಯದಲ್ಲೂ ಮನುಷತ್ವದ ಲೇಪ ಕಾಣುತ್ತೇನೆ, ಕಾರನ್ನೋ, ಸ್ಕೂಟಿಯನ್ನೋ ಡ್ರೈವ್ ಮಾಡುವಾಗ  ಇನ್ನ್ಯಾರೋ ಸಡನ್ ಆಗಿ ನುಗ್ಗಿ ಬಂದರೆ  ಇಬ್ಬರ ಮುಗುಳ್ನಗೆಯೇ ಸ್ಸಾರಿಯಾಗುತ್ತದೆ.
ಅಂತ  ಕ್ಷಣಗಳೆಲ್ಲ ಸುಂದರವಾಗುತ್ತದೆ, ಸುಂದರವಾದ ಮುಗುಳ್ನಗು ತುಟಿಯಲ್ಲಿ ಬಂದು ಕುಳಿತಿರುತ್ತದೆ ನಾ ನಗುವ ಮೊದಲೇ. ಒಮ್ಮೆ ಅರ್ಜುನ ಮತ್ತು ಕೃಷ್ಣ  ಪ್ರಯಾಣಿಸುವ ವೇಳೆ ಒಬ್ಬ ಬಡ ರೈತ ಮುದುಕನಿಗೆ ಸಹಾಯಿಸುತ್ತಾರೆ.
ಅರ್ಜುನನೆನ್ನುತ್ತಾನೆ,  'ಶ್ರಮ್  ಕರನೇ ಸೆ ಶಕ್ತಿ ಬಡಗಯಿ ಕೃಷ್ಣ'  ಕೃಷ್ಣನೆನ್ನುತ್ತಾನೆ, 'ನಹಿ ಅರ್ಜುನ್, ಸಹಾಯತಾ ಕರನೇ ಸೆ ಶಕ್ತಿ ಬಡಗಯಿ'.
ಗೇಟ್ ಹತ್ತಿರವೇ ನಿಂತಿದ್ದೆ, ಸೊಪ್ಪು ಮಾರುತ್ತ ಒಬ್ಬ ಅಜ್ಜಿ ಬಂದರು, ರಾಶಿ ತರಕಾರಿ ಇತ್ತು ಸೊಪ್ಪು ಬೇಕಿರಲ್ಲಿಲ್ಲ. ಅಜ್ಜಿ ಬಸವಳಿದಂತೆ ಕಾಣುತ್ತಿದ್ದರು .., ನೀರು ಬೇಕಾ ಕೇಳಿದೆ. ಹುಮ್ಮ್ ಅಂದರು, ಒಳಗೆ ಹೋಗಿ ಒಂದು ಖಾಲಿ  ಬಿಸ್ಲೇರಿ ಬಾಟಲಿಯಲ್ಲಿ ನೀರು ತುಂಬಿ ಈ ಬಾಟಲಿಯನ್ನು ಇಟ್ಟುಕೊಳ್ಳಿ ಅಂತ ಕೊಟ್ಟೆ. ಅಜ್ಜಿಗೆ ತುಂಬಾ ಖುಷಿಯಾದಂತೆ ಅನಿಸಿತ್ತು. ಅಜ್ಜಿಗೆ ಬಾಯಾರಿಕೆ ತಣಿದಿರಬಹುದು, ಮತ್ತೆ ಬಯಾರಿದರೆ ಬಾಟಲಿಯಲ್ಲಿ ನೀರು ಮಿಕ್ಕಿರಬಹುದು, ನೀರನ್ನು ತುಂಬಿಸಿಕೊಳ್ಳಲು ತಿಂಗಳ ತನಕ ಆ ಬಾಟಲಿಯೂ ಲಭ್ಯವಿರಬಹುದು .., ಅದಕ್ಕಿಂತ ಹೆಚ್ಚಾಗಿ ಆ ಜೀವಕ್ಕೆ ಚಿಕ್ಕದೊಂದು ಸಿಹಿಯ ತಂಪಿನ ಭಾವ ಅಲೆ ಅಲೆಯಾಗಿ ಮನಸ್ಸನ್ನು ಆವರಿಸಿಕೊಂಡಿರಬಹುದು,  ಮನಸಿಗೆ ಒಂದಷ್ಟು  ಸ್ಪೂರ್ತಿ ಹುಮ್ಮಸ್ಸು ತಂದಿರಬಹುದು, ಮನಸ್ಸಿನ ಭಾವ ಸಿಹಿಯಾಗಿರಬಹುದು.
ಮತ್ತು ..

ಅದು ನನ್ನ ಇವತ್ತಿನ ಮುಗುಳ್ನಗುವಾಗಬಹುದು  :) ಮತ್ತದು ಸಾಂಕ್ರಮಿಕವಾಗಲೂಬಹುದು  :) :)

12 comments:

  1. ಬದುಕನ್ನು ಅನುಭವಿಸಬೇಕು...
    ಪ್ರತಿಯೊಂದೂ ಕ್ಷಣವನ್ನು...

    ನಿಜಕ್ಕೂ ನಮ್ಮ ಬದುಕಿದು ಸುಂದರ...

    ಚಂದದ ಬರವಣಿಗೆಗೆ ಅಭಿನಂದನೆಗಳು...

    ReplyDelete
  2. ಹೌದು ತುಂಬಾ ನಿಜ ಪ್ರಕಾಶಣ್ಣ ..., ಚಂದದ ಪ್ರತಿಕ್ರಿಯೆಗೆ ತುಂಬು ಧನ್ಯವಾದಗಳು :)

    ReplyDelete
  3. ನಾವು ಸಹಾಯ ಮಾಡಿದರೆ ಬೇರೆ ಅವರು ನಮಗೆ ಸಹಾಯ ಮಾಡ್ತುತ್ತಾರೆ. ಆದರೆ ನಾವು ಅಪೇಕ್ಷಿಸುವುದು ಸರಿಯಲ್ಲ. Nicely written....😊

    ReplyDelete
  4. Thank you Anand Joshi yavare ಸಹಾಯಕ್ಕಿಂತ ಸುಂದರ ಭಾವನೆಗುಳು ಅನಾವರಣವಾಗುತ್ತದೆ , ಮತ್ತದು ಸಂತೋಷವನ್ನು ಕೊಡುತ್ತದೆ .

    ReplyDelete
  5. ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ಮನಸ್ಸಿಗೆ ಮುಟ್ಟುವಂತೆ ಬರೆದಿರುವ. ನಿಮ್ಮ ಲೇಖನ ಚೆನ್ನಾಗಿದೆ ..ಚೈತ್ರಾ..

    ReplyDelete
  6. ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ಮನಸ್ಸಿಗೆ ಮುಟ್ಟುವಂತೆ ಬರೆದಿರುವ. ನಿಮ್ಮ ಲೇಖನ ಚೆನ್ನಾಗಿದೆ ..ಚೈತ್ರಾ..

    ReplyDelete
  7. This comment has been removed by the author.

    ReplyDelete
  8. ತುಂಬಾ ನೈಜವಾಗಿದೆ

    ReplyDelete
  9. nice writing... please publish this articles in a book

    ReplyDelete

----------------------------------