ಕಲಿಸು ಮಗುವು ನಗಲು
ನಿಷ್ಕಲ್ಮಶವಾಗಿ ;
ಕಲಿಸು ನಿನ್ನಂತೆ ನೋಡಲು
ವಿಸ್ಮಯವಾಗಿ;
ವಿಸ್ಮಯವಾಗಿ;
ಕಲಿಸು ನಿನ್ನಂತೆ ಮನಸು
ಸ್ವಚ್ಚವಾಗಿ;
ಸ್ವಚ್ಚವಾಗಿ;
ಕಲಿಸು ನಿನ್ನಂತೆ ಬಿಸುಪು
ಆಪ್ತವಾಗಿ ;
ಆಪ್ತವಾಗಿ ;
ಕಲಿಸು ನಿನ್ನಂತೆ ಭಾವ
ಶುದ್ಧವಾಗಿ ;
ಶುದ್ಧವಾಗಿ ;
ಕಲಿಸು ನಿನ್ನಂತೆ ಆತ್ಮ
ಪರಿಶುದ್ದವಾಗಿ ;
ಪರಿಶುದ್ದವಾಗಿ ;
ಕಲಿಸು ಮಗೂ ಅತ್ತಾಗ
ಅಳಲು ;
ಅಳಲು ;
ಕಲಿಸು ಮಗೂ ನಕ್ಕಾಗ
ನಗಲು ;
ನಗಲು ;
ನನಗೂ ಕಲಿಸು ಮಗೂ ನಿನ್ನಂತೆ,
ಇದ್ದು ಬಿಡಲು ನಾನು... ನನ್ನಂತೆ .....
ಇದ್ದು ಬಿಡಲು ನಾನು... ನನ್ನಂತೆ .....