Monday, November 2, 2009

ವಾಸ್ತವತೆಯ ಪರಿ ..!!!

ಸುಮ್ಮನೆ ಕನಸುತ್ತೇನೆ ಹಗಲು ಬರಲಿ ಎಂದು ,

ಬಂತೆಂದುಕೊಳ್ಳುವಸ್ಟರಲ್ಲಿ ಕಾರಿರುಳೊಂದು

ನನ್ನ ಹಗಲಿನ ಬಾಗಿಲು ತಟ್ಟಿರುತ್ತದೆ;

ಹಗಲು ಕ್ಷಣಿಕವಾಗುತ್ತದೆ ...,

ಇರುಳು ದೀರ್ಗವೆನಿಸುತ್ತದೆ ...;

ಹಗಲು ಇರುಳು ಕಾಲಚಕ್ರದಲ್ಲಿ ,

ನಿರಂತರವಾಗಿ ಸುತ್ತುತ್ತಲೇ ಇರುತ್ತದೆ ..,

ನನಗದು ಅರ್ಥವಾಗುವುದೇ ಇಲ್ಲ ...,

ಸುಮ್ಮನೆ ಕನಸುತ್ತೇನೆ ಹಗಲು ಬರಲಿ ಎಂದು ...!!!
                    
                                                         ಚೈತ್ರ ಅಮರ್

Monday, October 26, 2009

ಇವರು ಹುಡುಗಿಯರು ..!!!!!

ಹೊಸ್ತಿಲು ದಾಟುವಾಲೆ ನಾವು ....
ಬೀಗವನ್ನು ಜಡಿದಿರುತ್ತೇವೆ ,
ನಮ್ಮ ಮನಸ್ಸುಗಳಿಗೆ ;
ಕಣ್ಣಿನ ಕಿಟಕಿಗಳನ್ನು ಮುಚ್ಚಿರುತ್ತೇವೆ ,
ಮನದೊಳಕ್ಕೆ ಯಾರೂ ಇಣುಕಬರದಲ್ಲ?
ಬೀದಿಯಲ್ಲಿ ಜನರೆಸ್ಟೋ ...?
ಮುಚ್ಚಿದ ಬಾಗಿಲ ಹಿಂದೆ ,
ಕಾಯುವವರು ಅದೆಸ್ಟೋ....;
ನಾವು ಹಾಗೆಲ್ಲ ಬಾಗಿಲು ತೆರೆಯುವವರಲ್ಲ ..;
ಆದರೂ ಒಬ್ಬ ಬಂದೆ ಬಿಡುತ್ತಾನೆ ..,
ಕಿಟಕಿ ತೆರೆದು ಬೀಗ ಮುರಿದು ...
ಸೀದಾ ಒಳಕ್ಕೆ !!!!
ಬಂದ ನಿಜವನ್ನು ಒಪ್ಪಿಕೊಲ್ಲುತ್ತೆವ ..?
ನಮಗೆ ನಾವೇ !!??
ನಿಜಕ್ಕೆ ಸುಂಕ ಕಟ್ಟಬೇಕಲ್ಲ ;
ಜೀವಗಳ ಬೆಲೆ ಕಮ್ಮಿಯೆನು ?
ದೇಶ ಕೋಶಗಳು ಸುಂಕವಲ್ಲದೆ ಇನ್ನೇನು ?
ನಿಜವನ್ನು ನಾವು ನಮ್ಮೊಳಗೆ
ಸಮಾದಿ ಮಾಡಿಕೊಳ್ಳುತಿದ್ದೇವೆ ;
ಶತ ಶತಮಾನಗಳಿಂದಲೂ ....!!!
                     
                      ಚೈತ್ರ ಅಮರ್

Friday, October 23, 2009

ನೀರಿಕ್ಷೆಯ ನಿಟ್ಟುಸಿರು ....!!

(೧)
ವಸಂತವಿತ್ತು ..,
ಕೋಗಿಲೆಯ ದನಿಯೂ ಇತ್ತು ;
(೨)
ಮಳೆಗೆ ಸಂಬ್ರಮವಿತ್ತು..,
ಭುವಿಗೆ ಸಮ್ಮತಿಯೂ ಇತ್ತು ;
(೩)
ದನ್ಯ ಮಿಲನಕೆ ..,
ಸಾರ್ಥಕ್ಯದ ಬಾವವಿತ್ತು ;
(೪)
ತುಂಬಿದ ಒಡಲು ..,
ಹಸುರಿನ ಸಿಂಗಾರ ;
(೫)
ನೀರೀಕ್ಷೆಯ ನಿಟ್ಟುಸಿರಲ್ಲಿ ..,
ಬರಿದೆ ನೆನಪುಗಳು ;
. . .

               ಚೈತ್ರ  ಅಮರ್