ಮಹಿಳೆ .....
ಸಾಧನೆಗೆ ಸವಾಲುಗಳ ಸರಮಾಲೆ :
ಆಕೆ :
ಬೆಳಗ್ಗೆ 6 ಘಂಟೆಗೆ ಏಳುತ್ತಾಳೆ, ಕಾಫೀ ಮಾಡಿ ತಿಂಡಿ ರೆಡಿ ಮಾಡಿ ಮಧ್ಯಾನಕ್ಕೆ ಲಂಚ್ ಬಾಕ್ಸ್ ರೆಡಿ ಮಾಡಿ, ಮಗುವನ್ನು ಎಬ್ಬಿಸಿ, ಬೃಶ್ ಮಾಡಿಸಿ, ಸ್ನಾನ ಮಾಡಿಸಿ ರೆಡಿ ಮಾಡಿ ಸ್ಕೂಲ್ ಬಸ್ ಹತ್ತಿಸಿ ತಾನು ಆಫೀಸ್ ತಲುಪಿಕೊಳ್ಳುವಷ್ಟರಲ್ಲಿ 10 ನಿಮಿಷ ಲೇಟ್ ಆಗಿಬಿಟ್ಟಿರುತ್ತದೆ, ರಾತ್ರೆ ಬಂದು ಮತ್ತದೇ ಕೆಲಸ.. ಅಡಿಗೆ ....... ಮುಗಿಸುವಷ್ಟರಲ್ಲಿ , ಮನಸು ದೇಹ ಎರಡೂ ದಣಿದಿರುತ್ತದೆ
ಆತ :
ಬೆಳಗ್ಗೆ ಎದ್ದು ತಿಂಡಿ ತಿಂದು ರೆಡಿ ಆಗಿ ಆಫೀಸ್ ಸೇರಿಕೊಳ್ಳುವಷ್ಟರಲ್ಲಿ ಸಮಯ ಸರಿಯಾಗಿರುತ್ತದೆ, ಮತ್ತೆ ಆತ ರಾತ್ರೆ ಮನೆ ತಲುಪುವುದು ಇನ್ನು ಎಷ್ಟು ಹೊತ್ತಿಗೋ...
ಇನ್ನು ಮಗು ಚಿಕ್ಕದಾದರೆ ಬೆಳಿಗ್ಗೆಯಿಂದ ಸಂಜೆಯವರೆಗೆ, ' Day Care ' ಸ್ಕೂಲ್ ಗೆ ಹೋಗುವ ಮಗುವಾದರೆ ಅಲ್ಲಿಂದ ಡೈರೆಕ್ಟ್ Day Care ಇನ್ನು ತಂದೆ ತಾಯಿಯಂದಿರಿಗೆ ತಮ್ಮ ಮಕ್ಕಳೊಂದಿಗೆ ಕಳೆಯಲು ಸಮಯವಾದರೂ ಎಲ್ಲಿ ?
ಇದು ಬೆಂಗಳೂರು ಅಥವ ಇನ್ನಿತರ ನಗರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.
ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹೆತ್ತವರ ಪಾತ್ರ ಅತೀ ಅಗತ್ಯ , ತಜ್ನ್ಯರ ಪ್ರಕಾರ ಮಗುವಿನ ಮಾನಸಿಕ ಬೆಳವಣಿಗೆಗೆ ತಾಯಿಯ ಪಾತ್ರ ಅತಿ ಮುಖ್ಯ . ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ನರಮಂಡಲ ವಿಕಸನ ಗೊಳ್ಳುತ್ತದೆ . ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಾಯವಾಗುತ್ತದೆ . ತಂದೆ ತಾಯಿಯಿಂದ ದೂರವಿದ್ದು Day Care ಸೆಂಟರ್ ನಂಥ ಜಾಗದಲ್ಲಿ ಬೆಳೆಯುವ ಮಕ್ಕಳು ಅನೇಕ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂಬುದು ತಜ್ನ್ಯರ ಅಭಿಪ್ರಾಯ. ಮುಂದುವರೆದ ನಗರಗಳಲ್ಲಿ ಅಷ್ಟೇ ವೇಗವಾಗಿ ಚೈಲ್ಡ್ ಕೌನ್ಸಿಲಿಂಗ್ ಸೆಂಟರ್ ಗಳು ತಲೆ ಎತ್ತುತ್ತಿರುವುದೇ ಇದಕ್ಕೆ ಸಾಕ್ಷಿ ..
ಅದೇ ವಾಸ್ತವತೆಯ ಅಡಿಯಲ್ಲಿ ಸಮಸ್ಯೆಯ ಇನ್ನೊಂದು ಮಗ್ಗುಲು ನೋಡುವದಾದರೆ ದಿನೇ ದಿನೇ ಏರುತ್ತಿರುವ ಜೀವನ ನಿರ್ವಹಣೆಯ ಬೆಲೆ , 'ಇಬ್ಬರು ದುಡಿದರೆನೆ ಬದುಕು ' ಎನ್ನುವಂಥಹ ಮಟ್ಟವನ್ನು ತಲುಪುತ್ತಿದೆ. ಅದೇ ಮಗುವಿನ ಭವಿಷ್ಯದ ಭದ್ರತೆಗಾಗಿ, ಬದುಕಿನಲ್ಲಿ ನೆಲೆ ಕಂಡುಕೊಳ್ಳುವಿಕೆಗಾಗಿ, ಉತ್ತಮ ಜೀವನ ನಿರ್ವಹಣೆಗಾಗಿ ಉದ್ಯೋಗ ಆಕೆಗೆ ಅನಿವಾರ್ಯದ ಅಗತ್ಯವೇ ಆಗಿಬಿಟ್ಟಿದೆ. ಓಡುತ್ತಿರುವ ಕಾಲದ ವೇಗಕ್ಕೆ ಹೊಂದಿಕೊಳ್ಳಬೇಕಿದೆ.
ಇನ್ನೊಂದು ಮಗ್ಗುಲು: ಆಕೆಯ ಬುದ್ದಿವಂತಿಕೆ, ಪ್ರತಿಭೆ, ಆಸಕ್ತಿ ಇಲ್ಲಿ ವಿಷಯವಾಗಿರುತ್ತದೆ . ಎಷ್ಟೋ ಕೋರಿಕೆಗಳು, ಅದಿನ್ನೆಷ್ಟೋ ಆಸೆಗಳನ್ನು ಹೊತ್ತು, ತನ್ನ ಗಮ್ಯದೆಡೆಗೆ ದೃಷ್ಟಿ ಇಟ್ಟು, ಶ್ರಮವಹಿಸಿ ಬೇಕೆಂದ ಗುರಿಯೆಡೆಗೆ ಆಗ ತಾನೇ ತಲುಪಿರುತ್ತಾಳೆ. ಅಥವಾ ತಲುಪುವ ಹಂತದಲ್ಲಿರುತ್ತಾಳೆ. ಕರ್ತವ್ಯ, ಜವಾಬ್ದಾರಿಯ ಮುಸುಕಿನೊಳಗೆ ಆಕೆಯ ಕನಸನ್ನು ಚಿವುಟಬಹುದೇ? ಆಕೆಯ ಅಪಾರ ಬುದ್ದಿ ಶಕ್ತಿ, ಪ್ರತಿಭೆ ಕೇವಲ ಒಗ್ಗರಣೆಯ ಚಿಟಪಟ ಸದ್ದಿನಲ್ಲಿ ಕಳೆದು ಹೋಗಬೇಕಿದೆಯೇ ?
ಮಗುವಿನ ಬೆಳವಣಿಗೆಗೆ ಅಡ್ಡಿಯಾಗದಂತೆ, ಸಂಸಾರಕ್ಕೆ ಸಾಥಿಯೂ ಆಗುತ್ತಾ ... ತನ್ನ ಪ್ರತಿಭೆ, ವ್ಯಕ್ತಿತ್ವದೊಂದಿಗೆ ಬೆಳೆಯುವ ಅನಿವಾರ್ಯತೆ ಇಂದಿನ ಮಹಿಳೆ ಎದುರಿಸಿತ್ತಿರುವ ಸವಾಲಾಗಿದೆ .. ಮತ್ತು ಮಹಿಳೆ ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ಈ ನಿಟ್ಟಿನಿನಲ್ಲಿ ಸಮಾಜ, ಕುಟುಂಬ, ಆಕೆಯ ಪತಿ ಪ್ರತಿಯೊಬ್ಬರೂ ಆಕೆಗೆ ಬೆಂಬಲವಾಗಿ ನಿಲ್ಲಬೇಕಿದೆ .
- ಚೈತ್ರ ಬಿ. ಜಿ.