ಯಾಕೋ ಮಳೆ ಸುರಿದ ಅನುಬವ ಆದಂತಾಗಿ ಮನೆಯ ಬಾಗಿಲು ತೆರೆದಾಗ ಸ್ಸೂ ಎಂಬ ಗಾಳಿಯು ಮುಖಕ್ಕೆ ರಾಚಿತು , ಜೊತೆಗೆ ಚಿಟಿ ಚಿಟಿ ಮಳೆ ಬೇರೆ ! ಕಪ್ಪನೆ ಕವಚಿಕೊಂಡ ಮೋಡ ! ಅರೆ ! ವರುಷ ಪೂರ್ತಿ ಮಳೆಗಾಳವೆನ ? ಸುರಿವ ಮಳೆಯನ್ನ ತುಂಬಾ ಇಷ್ಟ ಪಡುವ ನನಗೂ ಕೂಡ ಈ ಮಳೆಯಿಂದ ಕಿರಿ ಕಿರಿ ಎನ್ನಿಸತೊಡಗಿತು , ಒದ್ದೆಯಾದ ಭೂಮಿಗೂ ಮಳೆ ನನ್ನಂತೆ ಇಷ್ಟವಾಗುತ್ತಿಲ್ಲ ಎಂಬ ಅನಿಸಿಕೆ ನನಗೆ , terece ನ ಆಚೆ ಕಣ್ಣು ಹಾಯಿಸಿದಾಗ ಅಲ್ಲೊಬ್ಬರು ಇಲ್ಲೊಬ್ಬರು ಕೊಡೆ ಹಿಡಿದು ನಡೆಯುತ್ತಿದ್ದರು , ಕೆಲವು ಮಂದಿ ಬೈಕ್ ನಲ್ಲಿ raincoat ಇಲ್ಲದೆ ನೆನೆಯುತ್ತ ಸಾಗುತ್ತಿದ್ದರು . ಒಣಹಾಕಿದ ಬಟ್ಟೆಗಳು ಪೂರ್ತಿ ಒಣಗದೇ ಒದ್ದೆಯಾಯಿತಲ್ಲ ಅಂತ ಪೆಚಾಡಿಕೊಂಡೆ , ಅಷ್ಟರಲ್ಲಿ ನನ್ನ phone ರಿಂಗಣಿಸಿತು , ಅಮ್ಮನದು call ಮಾತಾಡಿ ಮುಗಿಸಿ ಇಟ್ಟಾಗ ೨೦ ನಿಮಿಷ ಮುಗಿದಿತ್ತು . ತಲೆಯಲ್ಲಿ ಸಮಸ್ಸ್ಯೆಗಳ ಪಟ್ಟಿ ತುಂಬಿತ್ತು . ಅಮ್ಮ ಹೇಳಿದ್ದರ ಸಾರಾಂಶ ಇಷ್ಟು : ಊರಿನ ಕಡೆಯಲ್ಲಿ ಇಷ್ಟೊತ್ತಿಗೆ ಅಡಿಕೆ ಕೊಯ್ಲು ಶುರುವಿಡಬೇಕಿತ್ತು ಬೇರೆ ಕೆಲಸಕ್ಕೆ ಆಳುಗಳು ಬರುತ್ತಿಲ್ಲ , ಸುಲಿಯಲು ಡಬ್ಬಕ್ಕೆ ೭೫ ರುಪಾಯಿ ಕೊಡುತ್ತೀನೆಂದರೂ ಸುಲಿಯುವವರಿಲ್ಲ ,
ಒಹ್! ಒಂದಾ ? ಎರಡಾ ? ಅಡಿಕೆ ಬೆಳೆಗಾರರು ಎಷ್ಟೊಂದು ಸಂಕಟಕ್ಕೆ ಸಿಲುಕಿದರಲ್ಲ ಎನಿಸಿತು . ದಾರಣೆ ಚೆನ್ನಗಿದ್ದಾಗ ಫಸಲು ಕಡಿಮೆ ಫಸಲು ಚೆನ್ನಾಗಿದ್ದಾಗ ಧಾರಣೆ ಇಲ್ಲಾ , ಎರಡೂ ಇದ್ದಾಗ ಕೊಳೆ ರೋಗ! ಇಲ್ಲವೇ ಮಳೆ ! ಒಹ್! ಎಷ್ಟೊಂದು ಸಮಸ್ಯೆ ! ಬೀಸಿ ಬಂದ ಗಾಳಿಗೆ ರಪ್ಪನೆ ಬಡಿದುಕೊಂಡ ಕಿಟಕಿಗಳು ನನ್ನ ಯೋಚೆನೆಯನ್ನು ನಿಲ್ಲಿಸಿದವು . ಬೇಗ ಬೇಗನೆ ಎಲ್ಲ ಕಿಟಕಿಯ ಬಾಗಿಲನ್ನು ಹಾಕಿದೆ. ಮಳೆ ಸ್ವಲ್ಪ ಜೋರಾಗಿಯೇ ಬರುತ್ತಿತ್ತು . ಸ್ವಲ್ಪ ಬೇಸರವಾದಂತೆನಿಸಿ T .V on ಮಾಡಿದೆ ಕೋಟಿಗಟ್ಟಲೆ ಭೂ ಹಗರಣದ ವಿಷ್ಯ breaking ನ್ಯೂಸ್ ಆಗಿತ್ತು ,ಜೊತೆಗೆ highcommand ಮುಖ್ಯಮಂತ್ರಿಯವರ ರಾಜೀನಾಮೆಯನ್ನು ಕೇಳುತ್ತಿತ್ತು , ಅವರೇ ಗ್ರಹಚಾರವನ್ನು ಸುತ್ತಿಕೊಂಡಿದ್ದಾರೋ ಅಥವಾ ಗ್ರಹಚಾರವೇ ಅವರನ್ನು ಸುತ್ತಿಕೊಂಡಿದೆಯೋ ಯಾರಿಗೊತ್ತು ? ಈ ಸಲ ಅವರನ್ನು ಯಾವ powerful ದೇವರು ಕಾಪಾಡುತ್ತಾನೋ (ಕೈ ಬಿಡುತ್ತಾನೋ ?) ನೋಡಬೇಕಿದೆ . T .V off ಮಾಡಿ ಪೇಪರ್ ತೆರಯುವಷ್ಟರಲ್ಲಿ ನನ್ನ 3 ವರ್ಷದ ಪುಟ್ಟ ಮಗಳು ಅಮ್ಮ ಎಂದು ಕೈ ಹಿಡಿದು ಜಗ್ಗುತ್ತಿದ್ದಳು , ಹೊರಗಡೆ ಮಳೆಯೂ ನಿಂತಿತ್ತು , ಅವಳ ಕೈ ಹಿಡಿದು ಪಾರ್ಕಿನೆಡೆ ಹೆಜ್ಜೆ ಹಾಕಿದೆ.