ಮೊದಲೆಲ್ಲಾ ನಾನೂ ಹಾಗೆ ಮಾಡುತ್ತಿದ್ದೆ, ಮನೆ ಮುಂದೆ ಬಂದ ತರಕಾರಿ ಮಾರುವವನ ಗಾಡಿಯಲ್ಲಿರುವ ಟೊಮೇಟೊವನ್ನು ಮುಟ್ಟಿ ಮುಟ್ಟಿ ಪರಿಶೀಲಿಸಿ ತೆಗೆದುಕೊಳ್ಳುತ್ತಾ , ' ಯಾಕ್ರೀ ಅಂಗಡಿಯಲ್ಲಿ ಇಷ್ಟು ನಿಮ್ದ್ಯಾಕ್ರೀ 1 ರುಪಾಯೇ ಜಾಸ್ತಿ ? ಎನ್ನುತ್ತಿದ್ದೆ , ಎಳನೀರು ಹೊಟ್ಟೆ ತುಂಬಾ ಕುಡಿದು ಯಾಕೆ ಒಂದು ರುಪಾಯೀ ಜಾಸ್ತಿ ಪಕ್ಕದ ಬೀದಿಯಲ್ಲಿ ಕಡಿಮೆ ? ಎನ್ನುತ್ತಿದ್ದೆ , ಸಿಗ್ನಲ್ಲಿ ಪೆರೆಲೆ ಕಾಯಿಯೂ ಮಾವಿನ ಕಾಯಿಯೋ ಬಂದರೆ 1೦ ರುಪಾಯಿಗೆ 3 ರೆನಾ? 4 ಕೊಡಿ ಎನ್ನುತ್ತಿದ್ದೆ, ಹೀಗೆ ಚೌಕಾಸಿ ಮಾಡುವುದು ಅದೇನೋ ರೂಢಿಗತವಾಗಿಬಿಟ್ಟಿತ್ತು .
ಆದರೆ ಒಮ್ಮೆ ಯೋಚಿಸಿ ನೋಡೋಣ, ತರಕಾರಿ ತರುವವನು ಬೆಳಗ್ಗೆ 3 ಗಂಟೆಗೆ ಎದ್ದು, ಸೈಕಲ್ ತುಳಿದು, ಯಶವಂತ ಪುರ ಮಾರ್ಕೆಟ್ಗೋ, HAL ಗೋ ಅಥವ ಇನ್ನೆಲ್ಲೋ ಮೈಲುಗಟ್ಟಲೆ ಹೋಗಿ, ತರಕಾರಿ ತಂದು, ಮತ್ತೆ ಅದನ್ನು ಪ್ರತಿ ಮನೆ ಮನೆಗೂ ಮಾರಿ, ಅವರ ಉಲ್ಟಾ ಪಲ್ಟ ಮಾತನ್ನೂ ಕೇಳಿಸಿಕೊಂಡು, ಅಷ್ಟಕ್ಕೂ ಅವರಿಗೆ ಸಿಗುವ ಲಾಭದ ಪರಿಮಾಣವಾದರೂ ಎಷ್ಟು ? kg ಗೆ ಒಂದು ರುಪಾಯೀ? ಎರಡು ರುಪಾಯೀ ? ಬೇಡ 3 ರುಪಾಯೀ ? ಎಳನೀರಾತನಿಗೆ ಸಿಗುವ ಲಾಭವಾದರೂ ಎಷ್ಟಿದ್ದೀತು? ಸಿಗ್ನಲ್ಲಲ್ಲಿ ಪೆರೆಲೆ ಕಾಯಿಯನ್ನೊ ಮಾವಿನಕಾಯಿಯನ್ನೋ ಮಾರುವವರ ಲಾಭದ ಪರಿಮಾಣ ಎಷ್ಟು ಪೈಸೆ ಅಥವ ಎಷ್ಟು ರುಪಾಯೀ ಇದ್ದೀತು?
ವಿಷಯ ಇಷ್ಟೇ ಅಲ್ಲ ...
ನಾವುಗಳು ಮಾಲ್ ಹೊಕ್ಕರೆ ಸಾವಿರದ ನೋಟು ಚಿಕ್ಕದೆನಿಸುತ್ತದೆ, ಹೋಟೆಲೊಳಗೆ ಹೊಕ್ಕು ಕುಳಿತರೆ ಮಿತಿಮೀರಿದ ಬಿಲ್ ಜೊತೆಗೆ ಮುಲಾಜಿಗಾದರೂ ಟಿಪ್ಸ್ ಅಂತ ಬಿಟ್ಟು ಬರುತ್ತೇವೆ, ಪೆಟ್ರೋಲನ್ನು ಬಕಾಸುರನಂತೆ ಕುಡಿದು 5 ಜನರು ಓಡಾಡುವ ಕಾರಿನಲ್ಲಿ ದಿಲ್ ಅಂತ ಒಬ್ಬರೇ ಓಡಾಡುತ್ತೇವೆ, ಸಿನೆಮಾಕ್ಕೆ ಹೋಗಿ ಕುಳಿತರೆ ಅಲ್ಲಿಯ ಪೋಪ್ಕೊನ್ರ್ನ್ ಗೆ ದುಪ್ಪಟ್ಟು ದುಡ್ಡು ಚೆಲ್ಲುತ್ತೇವೆ, ಪಟ್ಟಿ ಉದ್ದಕ್ಕೆ ಬೆಳೆಯುತ್ತಲೇ ಹೋಗುತ್ತದೆ....
ರಿಲಯನ್ಸ್ ಫ್ರೆಶ್ ನಲ್ಲಿ ವ್ಯಾಕ್ಸ್ ಬಳಿದಿಟ್ಟ, ಸಕ್ಕರೆ ಇಂಜೆಕ್ಷನ್ ಚುಚ್ಚಿದ ಫಳ್ಳನೆ ಹೊಳೆಯುವ ಸೇಬುವಿಗೆ kg ಗೆ ನೂರಿಪ್ಪತ್ತಾದರೂ ಕೊಡುತ್ತೇವೆ, ಮತ್ತೆಷ್ಟಾದರೂ ಕೊಡುತ್ತೇವೆ, ಕೊಟ್ಟು ಕವರೊಳಗೆ ತುಂಬಿಸಿಕೊಳ್ಳುತ್ತೆವೆ, ಆ ಕವರಿಗೆ ಮತ್ತೆ ಒಂದೋ ಎರಡೋ ರುಪಾಯೀಯನ್ನೂ ಕೊಡುತ್ತೇವೆ, ಬಿಸಿಲಿನಲ್ಲಿ ತಲೆ ಮೇಲೆ ಹೊತ್ತ ನಮ್ಮದೇ ನೆಲದ ಪೇರಲೆ ಹಣ್ಣಿಗೆ ಇಪ್ಪತ್ತು ರುಪಾಯೆಗೆ ನಾಲ್ಕು ಕೇಳುತ್ತವೆ, ತಯಾರಿಕೆಗೆ ಕೇವಲ ಎರಡು ರುಪಯೀ ಖರ್ಚಾಗುವ ಪೆಪ್ಸಿ ಗೆ 2 5 ರುಪಾಯೆಯನ್ನು ಕೊಡುವಾಗ ನಾವು ತಪ್ಪಿಯೂ ಚೌಕಾಸಿ ಮಾಡುವುದಿಲ್ಲ , ದುಡ್ಡು ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತೇವೆ. ಇಲ್ಲೇ ಮಂಡ್ಯದವನೋ ತಿಪಟೂರವನೋ ಬೆಳೆದ ಎಳನೀರಿಗೆ ಅದನ್ನ ಮಾರುವವನಿಗೆ ನಮ್ಮದು ಒಂದು ರುಪಾಯೀ ಎರಡು ರುಪಾಯಿಗೆ ಚೌಕಾಸಿ !
ಅದೇನಾಯಿತೋ .., ಇತ್ತೀಚಿಗೆ ಶ್ರಮ ಪಟ್ಟು ಕೆಲಸ ಮಾಡುವ ಇಂತವರ ಜೊತೆ ಚೌಕಾಸಿ ಮಾಡಬೇಕಿನಿಸುತ್ತಿಲ್ಲ ಉಳಿತಾಯ ಮಾಡುವ ಮನಸಿದ್ದರೆ ಬೇಕಷ್ಟು ಮಾರ್ಗಗಳಿವೆ, ಅವರ ಶ್ರಮದ ಬೆವರು ಬೇಡ, ಈ ತರ ಚೌಕಾಸಿ ಮಾಡಿ ಬುದ್ದಿವಂತೆ ಎನಿಸಿಕೊಳ್ಳುವುದಕ್ಕಿಂತ ದಡ್ಡಿಯಾಗಿರಲೇ ಇಷ್ಟ ಪಡುತ್ತೇನೆ, ಇತ್ತೀಚಿಗೆ 'ಯಾಕೆ ಒಂದು ರುಪಾಯೇ ಜಾಸ್ತಿ' ಎನ್ನುವ ಬದಲು ತರಕಾರಿ ಗಾಡಿಯವನ ಬಳಿ , 'ಎಲ್ಲಿಂದ ತರ್ತೀರಾರೀ?, ಎಷ್ಟು ಕೊಡ್ತೀರಾರೀ ? ', ತರಕಾರಿ ಕೊಳೆತರೆ ಏನು ಮಾಡ್ತೀರಾ? ಕೇಳುತ್ತೇನೆ , ಎಳನೀರಾತನೊಂದಿಗೆ , ' ಎಲ್ಲಿಂದ ಬರತ್ತೆ? ನಿಮಗೆ ಎಷ್ಟಕ್ಕೆ ಸಿಗತ್ತೆ , ಲಾಭ ಆಗತ್ತಾ ? ಹಾಳು ಆದರೆ ಏನು ಮಾಡ್ತೀರಾರೀ? ಎನ್ನುತ್ತೇನೆ, ಅವಾಗಲೇ ಗೊತ್ತಾಗಿದ್ದು ನನಗೆ ಪೋಲಿಸಿನವರಿಗೂ ಪಾಲು ಕೊಡಬೇಕಂತೆ! ಕೇಳಿದಾಗಲೆಲ್ಲಾ ಎಳನೀರೂ ಕೊಡಬೇಕಂತೆ !
ರೆಡಿಮೇಡ್ ಫುಡ್ ಪ್ಯಾಕೆಟ್, ಪೆಪ್ಸಿ ಕೋಕಾಕೋಲ, ಐಸ್ ಕ್ರೀಂ, ಕೇಕ್, ಹಾಳು ಮೂಳು ಅಂತ ದುಡ್ಡು ಚೆಲ್ಲಿ ನಮ್ಮ ಆರೋಗ್ಯವನ್ನೂ ಕೆಡಿಸಿಕೊಂಡು ಬೇರೆ ದೇಶದವರ ಹೊಟ್ಟೆ ತುಂಬಿಸುವುದು, ಅವರನ್ನು ಶ್ರೀಮಂತಗೊಳಿಸುವುದು ನಮ್ಮ ಯಾವತ್ತಿನ ಕೆಲಸವೇ ! ಇರಲಿ ಬಿಡಿ, ಆದರೆ ನಮ್ಮ ರಾಮನಗರದ ತಿಪ್ಪಣ್ಣ, ಚಿಕ್ಕಬಳ್ಳಾಪುರದ ಮಂಜಣ್ಣ , ಮಂಡ್ಯದ ಸೋಮಣ್ಣ , ತಿಪಟೂರಿನ ಮತ್ಯಾವುದೋ ಅಣ್ಣ , ಅವರೂ ಸ್ವಲ್ಪ ಬೆಳೆಯಲಿ, ನಮ್ಮ ದೇಹಕ್ಕೆ ಅಗತ್ಯವಾದ ತರಕಾರಿ, ಇನ್ನಿತರ ಆರೋಗ್ಯಕರ ಬೆಳೆ ಬೆಳೆಯುವವರ, ಮಾರುವವರ ಹೊಟ್ಟೆ ಯಾವತ್ತೂ ತಣ್ಣಗಿರಲಿ.....
ಕೊನೆಗೆ,
ಕೊಟ್ಟ ಭಿಕ್ಷೆ ಕೂಡ ಸೋಮಾರಿತನಕ್ಕೆ ಪ್ರೋತ್ಸಾಹವಾಗಬಹುದು, ದೇವರ ಹುಂಡಿಗೆ ಬಿದ್ದ ದುಡ್ಡು ಕೂಡ ಎಲ್ಲೋ ಯಾರದ್ದೋ ಹೊಟ್ಟೆ ತುಂಬಿದವರನ್ನೇ ಇನ್ನಷ್ಟು ತುಂಬಿಸಬಹುದು, ಆದರೆ ನಮ್ಮಂತವರ ಒಂದು ಎರಡು ರುಪಾಯೀ ಲಾಭ ಅವತ್ತಿನ ಅವನ ಅನ್ನವಾಗಬಹುದು, ಅಲ್ಲವೇ....?
ಚೈತ್ರ ನಂದೂ ಇದೇ ಅಭಿಪ್ರಾಯ ...ನಾನೂ ಇಂತವರೊಂದಿಗೆ ಯಾವತ್ತೂ ಚೌಕಾಸಿ ಮಾಡುವುದಿಲ್ಲ
ReplyDeleteಹೌದು... ಇಂತವರ ಜೊತೆ ಚೌಕಾಸಿ ಮಾಡುವುದು ಸರಿಯಲ್ಲ .., ಅಭಿಪ್ರಾಯಿಸಿ ಪ್ರೋತ್ಸಾಯಿಸಿದ್ದಕ್ಕೆ ಥ್ಯಾಂಕ್ಸ್ ಸುಮಕ್ಕ .
Deleteತಳ್ಳು ಗಾಡಿಯಣ್ಣನ ಪರವಾದ ಈ ಲೇಖನ ಹಲವು ವಾಸ್ತವಗಳ ಕೈಗನ್ನಡಿ. ಇಂದಿಗೂ ರುಚಿಗಟ್ಟು ತಳ್ಳು ಗಾಡಿ ಚಿತ್ರಾನ್ನ.
ReplyDeleteತುಂಬಾ ಒಳ್ಳೆಯ ಲೇಖನಕ್ಕಾಗು ಧನ್ಯವಾದಗಳು.
facebook id: badarinath palavalli
ಹೌದು ಬದ್ರಿನಾತ್ ಸರ್ .... , ನಿಮ್ಮ ಪ್ರೋತ್ಸಾಹದಾಯಕ ಅಭಿಪ್ರಾಯಕ್ಕೆ ಧನ್ಯವಾದಗಳು ..
DeleteReally Nice....!
ReplyDeleteThank u so much.., please mention your name...
DeleteNice article chaitra. u r right. many times, its our ego that provokes us to bargain because the money involved is very meagre. we never give a thought to the person in the receiving end.
ReplyDeleteits high time, we change our mind setting.
thanx for thought provoking article. keep up the gud work.
Thank u.., Yah .. You are reight.. , it provkes like dt!
Deletethanks for ur comment nd encouragement,,
:):)
Deleterealy super. nimma vicharagalu arthapoorna. ishtavaytu chaitra avre nimma baraha.
ReplyDeleteThank u so much nimma abhiprayakke ....,' hejje gurutu ' ravare
Delete:).., nimma hesaru tilidilladakkaagi haage.. barede..
Super article akka... na yesto sarti ankatti prati dina ankatti same thot :)
ReplyDeletehouda..., nangoo ansittu anta yaaradroo heldaaga ... tumba khuhiyaagtu bardidakkoo.., Thanks for it..:)
DeleteTumba chennagi barediddeera madam.....ellaroo ide taraha think madidre tumba chennag iratte...esto kade saaviraru rupees kottu kondu kolluvavaru sannaputta tarakariyavara hattira, hoo maruvavana hattira onderadu rupees ge choukasi vyavahaara maduttare.
ReplyDeleteThank u .. please mention ur name....to mention the name just select the google or any account...,
Deletethank u..
Bahala Chennagide ee baraha...
ReplyDeleteThank u Kashyapravare..
DeleteThis comment has been removed by the author.
ReplyDeletevery nice and true words chaitra..loved your writing..keep it up...
ReplyDeleteThanks Seema...
Deletesuper aagiddu article.
ReplyDeleteCommonn agira facts awesome aagi banju
;)
adu nija .. thanku Vitta hegderavare ...
DeleteThis comment has been removed by the author.
ReplyDeleteThank U...
Deleteನಿಮ್ಮ ಬರವಣಿಗೆಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಕಾಣಬಹುದು. ಸಣ್ಣ ವ್ಯಾಪಾರಸ್ತರ ಜೊತೆ ಚೌಕಾಸಿ ಮಾಡಿ ಅವರ ಮನ ನೋಯಿಸುವುದು ಸರಿಯಲ್ಲ.
ReplyDeleteದನ್ಯವಾದಗಳು ಚಂದ್ರಶೇಕರ್ ಈಶ್ವರ್ ನಾಯಕ್ ಅವರೇ ... , ನಿಮ್ಮ ಅಭಿಪ್ರಾಯ ಸರಿಯಾಗಿದೆ , ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು .
ReplyDeleteನನ್ನ ಬ್ಲಾಗಿಗೂ ಭೇಟಿ ಕೊಡಿ ಒಂದು ವಿಭಿನ್ನ ಕಥೆ ಇದೆ.
Deleteನಿಮ್ಮ ಬ್ಲಾಗ್ ಸೊಗಸಾಗಿದೆ .., ಹೀಗೆ ಬರೆಯುತ್ತಿರಿ
Deleteಲೇಖನ ಚೆನ್ನಾಗಿದೆ. ನೀವು ಎತ್ತಿರುವ ಪ್ರಶ್ನೆಗಳು ಕೆಲವರನ್ನಾದರೂ ಬದಲಾಯಿಸಲಿ. ಹೀಗೆ ಬರೀತಾ ಇರಿ.
ReplyDelete- ಷಡಕ್ಷರಿ
ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು
ReplyDeleteಚೈತ್ರ ಬಿ . ಜಿಯವರೇ, ನಿಮ್ಮ ಬರಹ ನನಗೆ ತುಂಬಾ ಸಂತೋಷವನ್ನು ಕೊಟ್ಟಿದೆ, ರಸ್ತೆಯಲ್ಲಿ ತರಕಾರಿ ಮಾರುವವರ, ಮನೆಯಮುಂದೆ ಬಂದು ತರಕಾರಿಯನ್ನು ಮಾರಿ ಜೀವನ ಸಾಗಿಸುತ್ತಿರುವವರ ಬಗ್ಗೆ ಈ ನಿಮ್ಮ ಕಾಳಜಿಯನ್ನು ಕಂಡು ತುಂಬಾ ಹೆಮ್ಮೆಯಾಗಿದೆ. ನಮಗೆ ನಿಮ್ಮ ತರಹ ಚಿಂತಿಸುವ ಸ್ಪೂರ್ತಿ ಸಿಕ್ಕಿದೆ.
ReplyDeleteಹೃದಯಪೂರ್ವಕ ದನ್ಯವಾದಗಳು ಶಶಿಯವರೇ ....., ನಿಮ್ಮ ಅಭಿಪ್ರಾಯ ನನಗೆ ಸ್ಪೂರ್ತಿ ನೀಡಿದೆ !
ReplyDeleteಈ ಪ್ರಜ್ಞೆ ಎಲ್ಲರಲ್ಲೂ ಅವಶ್ಯಕತೆ ಇದೆ
ReplyDeleteನಿಜ .., ಪ್ರತಿಕ್ರಿಯೆಗೆ ದನ್ಯವಾದಗಳು
Delete