ಒಂದು ಹೆಣ್ಣಿನ ಆತ್ಮ ಸ್ವಗತ ..
PUC ನಲ್ಲಿ 85% ಬಂದಿದ್ದರೂ ಇಂಜಿನಿಯರಿಂಗ್ ಹೋಗದೆ ಡಿಗ್ರಿ ಗೆ ಸೇರಿಕೊಂಡಿದ್ದು , ಅಣ್ಣಂಗೆ 65% ಬಂದಿದ್ದರೂ ಕಷ್ಟಪಟ್ಟು ಇಂಜಿನಿಯರಿಂಗ್ ಕಾಲೆಜ್ ನಲ್ಲಿ ಸೀಟ್ ದಕ್ಕಿಸಿಕೊಟ್ಟಿದ್ದು .., ಬಿಡಿ ಎಷ್ಟಾದರೂ ಮದುವೆಯಾಗಿ ಬೇರೆ ಮನೆ ಸೇರೋ ನನ್ನ ಮೇಲೆ ಇನ್ವೆಸ್ಟ್ ಮಾಡೋದು ವೇಸ್ಟ್ ತಾನೇ ...? ಹಾಗೆನಿಲ್ಲಪ್ಪ ಅಪ್ಪ ಅಮ್ಮನನ್ನು ಬಿಟ್ಟು ಅಷ್ಟು ದೂರ ಇರೋ ಸಿಟಿಗೆ ಹೋಗಿ ನಂಗೆ ಓದ್ದೊಕಾಗಲ್ಲಪ್ಪ ....
ಬಿ.ಎಸ್ಸಿ ಮುಗಿಸಿದ್ದರಿಂದ ಎಮ್ ಎಸ್ಸಿ ಮಾಡುತ್ತೆನೆಂದು ಆಸೆ ತುಂಬಿದ ಕಂಗಳಿಂದ ಗಂಡನನ್ನು ಕೇಳಿದಾಗ , 'ಯಾಕೆ ಚಿನ್ನ ಕಷ್ಟ ಪಡ್ತೀಯ ... ಅರಾಮಗಿ ಇದ್ದುಬಿಡು' ಎಂದವನು ಇದೆ ಫೈನಲ್ ಅಂತ ನಯವಾಗಿ ಹೇಳಿ ಹೊದಾಗ ಹಿಂಡಿದ್ದು ಒಗೆದ ಬಟ್ಟೆಯನ್ನು...., ನನ್ನ ಮನಸ್ಸನ್ನೇನಲ್ಲ ಬಿಡಿ .....
ಅರ್ಧಕ್ಕೆ ಬಿಟ್ಟ ನನ್ನ ಸಂಗೀತವನ್ನು ಮುಂದುವರಿಸಲುಹೋದಾಗ ಮಾವ ಹೇಳಿದ್ದು 'ನಮ್ಮ ಮನೆ ಮಹಾಲಕ್ಷೀನಮ್ಮ ನೀನು , ನೀನು ಮಾತಾಡಿದರೆ ಸಂಗೀತದಂತೆ , ಮನೆ ಗಂಡ ಮಕ್ಕಳನ್ನು ಬಿಟ್ಟು ಯಾಕಮ್ಮ ನಿನಗೆ ಸಂಗೀತ ಗಿಂಗೀತಾ....? ಬೆಚ್ಚಗೆ ಸಂಸಾರ ನೋಡಿಕೊಂಡಿದ್ರೆ ಬೇಕಾದಷ್ಟಾಯಿತಲ್ಲಮ್ಮ ..' ಅಂತ ನಗೆ ಸೂಸಿದಾಗ ಸುಟ್ಟಿದ್ದು ನನ್ನ ದಂಡಿ ದಂಡಿ ಕನಸುಗಳನಲ್ಲ, ಅಡಿಗೆ ಮಾಡುವಾಗ ಎಲ್ಲೋ ಒಂಚೂರು ಮುಂಗೈಗೆ ಬೆಂಕಿ ತಗುಲಿತಷ್ಟೇ .....!
ಅಮ್ಮ .. ನಂಗೆ ಇಲ್ಲೇ ನೀರು ತಂದು ಕೊಡು .., ಅಮ್ಮ ನಂಗೆ ಶೂ ಹಾಕು , ಅಮ್ಮ ನನ್ನ ಬ್ಯಾಗ್ ತಂದುಕೊಡು ಎಂದು ಕುಳಿತಲ್ಲಿಯೇ ಸೇವೆ ಮಾಡಿಸಿಕೊಳ್ಳುವ ನನ್ನ ಮಗರಾಯನಿಗೆ 'ಸರದಾರ ಅವನು, ತಾನೇ ಮಾಡಿಕೊಳ್ಳಲು ಅವನದೇನು ನಿನ್ನಂತೆ ಹೆಣ್ಣೇ ...?' ನನ್ನ ಅತ್ತೆ ಸೊಲ್ಲು ನುಡಿವಾಗ ಅವಡು ಕಚ್ಚಿ ಬರುವಷ್ಟು ಕೊಪವಾದರೂ ......, ಬಿಡಿ ನಂಗೆ ಕೋಪ ಬರುವುದೇ ಇಲ್ಲ ..., ನನ್ನದು ಭಾರೀ ಶಾಂತ ಸ್ವಭಾವ ......!
ಕುರ್ತಾ ಜೀನ್ಸ್ ಹಾಕಿಕೊಂಡು ಬಿಂದಾಸ್ ಆಗಿ ಓಡಾಡುತ್ತಿದ್ದ ನನ್ನ ನಾದಿನಿಯನ್ನು ' ಎಲ್ಲಿ ತಗೊಂಡ್ಯೇ ಎಷ್ಟು ಚೆನ್ನಾಗಿದೆ ! ಅಂದಿದಕ್ಕೆ , ' ಬಿಡಿ ಅತ್ತಿಗೆ ನಿಮಗೆ ಸೀರೆ ಚೂಡಿದಾರನೇ ಒಪ್ಪುತ್ತೆ' ಅಂದ ಅವಳ ಜಾಣ್ಮೆಯ ಉತ್ತರಕ್ಕೆ ' ನಿನ್ನ ಆನೆ ಗಾತ್ರಕ್ಕೆ ಒಪ್ಪುತ್ತೆನಮ್ಮಾ ..?' ಅಂತ ನಾನೇನೂ ಕೇಳಲ್ಲ ಬಿಡಿ ..., ನಂಗೆ ಕೆಲವೊಮ್ಮೆ ಗಂಟಲ್ಲಲ್ಲಿ ಕಲ್ಲು ಸಿಕ್ಕಿ ಹಾಕಿಕೊಂಡಿರುವುದರಿಂದ ಎಷ್ಟೋ ಸಲ ಮಾತಾಡುವುದರ ಬದಲು ಸುಮ್ಮನಿದ್ದುಬಿಡುತ್ತೇನೆ .....!
'ನಿನ್ಯಾಕೆ ದುಡಿಯಬೇಕು .? ಕಷ್ಟ ಪಡಬೇಕು..? ನನ್ನ ದುಡ್ಡು ... ಸರ್ವಸ್ವ ಎಲ್ಲವೂ ನಿಂದೆ ತಾನೇ ...?' ಎಂದವನು ಪೈಸೆ ಪೈಸೆ ಗೂ ಲೆಕ್ಕ ಕೇಳುವಾಗ ಅವಮಾನದ ಛಡಿ ಏಟಿಗೆ ಸ್ವಾಭಿಮಾನ ನರಳಿದರೂ...ಹೊಂದಾಣಿಕೆಯ ಹೊದಿಕೆ... ಇಲ್ಲಪ ಹಾಗೇನೂ ಇಲ್ಲ ಗಂಡ ಹೆಂಡತಿ ಅಂದ ಮೇಲೆ ಯಾರೋ ಒಬ್ಬರು ಹೊಂದಿಕೊಂಡರಾಯಿತು ..., ಆದರೆ ಪ್ರತೀ ಸಲವೂ 'ಆ ಯಾರೋ ಒಬ್ಬರು' ' ನಾನು ' ಆಗಿರಬೇಕಷ್ಟೇ ... ತುಂಬಾ ಸುಲಭ ಅಲ್ಲವೇ !
ನನಗೆ ಎಷ್ಟು ಆರಾಮು ಎಂದರೆ .., ಮಾವನಿಗೆ ಕೋಪ ಬಂದೀತೆ ..? ಅತ್ತೆಗೆ ಬೇಸರವಾದೀತೇ ...? ಮಗನಿಗೆ ಸಕಲ ಸೌಕರ್ಯ ತಯಾರಾಗಿದೆಯೇ ...? ಗಂಡ ಸಿಟ್ಟಾದನೆ ...? ಬಂದ ನೆಂಟರಿಗೆ ಸಮಧಾನವಾಯಿತೆ ...? ಬರೀ 'ಇ..ಷ್ಟೇ' ನೋಡಿಕೊಂಡರಾಯಿತು ..., ಮತ್ತೆ ನನ್ನ ಕೋಪ , ಬೇಸರ , ಸೌಕರ್ಯ , ಸಿಟ್ಟು , ಸಮಾದಾನ ..? ಛೆ .., ಛೆ .., ನಂಗೆ ಅವೆಲ್ಲ ಏನೂ ಆಗಲ್ಲ ಬಿಡಿ ...., ಮನೆ ಮಹಾಲಕ್ಷ್ಮಿಯಲ್ಲವೇ ನಾನು.....!
ಅಡಿಗೆ ಮನೆಯ ನನ್ನ ಹೆಡ್ ಆಫೀಸಿನಲ್ಲಿ ನನ್ನ ಕನಸುಗಳು ನನ್ನನ್ನು ಗೇಲಿ ಮಾಡುವಾಗ.., ನನಗೆ ನಾನೇ ಅಪರಿಚಿತವೆನಿಸುವಾಗ .. ಸುಮ್ಮನೆ ಕಣ್ಣಲ್ಲಿ ಬಂದ ನೀರು ....ಈರುಳ್ಳಿ ಹೆಚ್ಚಿದ್ದಕ್ಕಾಗಿ ಮಾತ್ರ .....!!
ishtavaaytu baraha ...aneka hennumakkala novunnu samarthavagi bimbisiddiya chaitra
ReplyDeleteಥ್ಯಾಂಕ್ಸ್ ಸುಮಕ್ಕ ...
DeleteThis comment has been removed by the author.
ReplyDeleteThanks savita..
Deleteತುಂಬಾ ತುಂಬಾ ಇಷ್ಟವಾಯ್ತು....ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ.
ReplyDeleteಥ್ಯಾಂಕ್ಸ್ ..., ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು
DeleteThumba channagiddu...chaitrakka
ReplyDeleteಥ್ಯಾಂಕ್ಸ್ ನಾಗಭೂಷಣ ..
DeleteGud One , Keep writting..
ReplyDeleteThanks Ashu....
Deleteಚನ್ನಾಗಿದೆ ಬರಹ, ಹೆಣ್ಣು ಮಕ್ಕಳ ಸಂಕಷ್ಟಗಳ ಸರಮಾಲೆಯನ್ನೆ ಬಣ್ಣಿಸಿದ್ದೀರಿ.. ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು. "ಈಗಿನ ಈರುಳ್ಳಿ ಹೆಚ್ಚಿದರೂ ಕಣ್ಣಲ್ಲಿ ಒಂದು ಹನಿ ನೀರು ಬತಲೆ" ಅಂತ ನಮ್ಮನೆಯವಳು ಹೇಳಿದ ನೆನಪಾಯ್ತು...
ReplyDeleteನಿಮ್ಮ ಅನಿಸಿಕೆ ಅಭಿಪ್ರಾಯ ಪ್ರೋತ್ಸಾಹಕ್ಕೆ ಥ್ಯಾಂಕ್ಸ್ ..., ಬ್ಲಾಗ್ನಲ್ಲೇ ಕಾಮೆಂಟ್ ಹಾಕಿದಕ್ಕೆ ಮತ್ತೊಂದು ಥ್ಯಾಂಕ್ಸ್ .., ನಿಮ್ಮ 'ಮನೆಯವರು' ಹೇಳಿದ್ದು ನಿಜ .., ಈಗಿನ ಬೆಳ್ಳುಳ್ಳಿ, ಈರುಳ್ಳಿ .., ಇಂಗಿನಲ್ಲಿ ..ಎಲ್ಲಾ ಘಾಟೆ ಇರದಿಲ್ಲೆ ... :)
Deleteವಿಷಯ ಮತ್ತು ಹೇಳಿದ ರೀತಿ ಎರಡೂ ತುಂಬಾ ಇಷ್ಟವಾಯಿತು. ೩-೪ ಸಲ ಓದಿದೆ. ಸಮಾಜಕ್ಕೆ, ನಮಗೆ ರೇಷ್ಮೆ ಬಟ್ಟೆ ಸುತ್ತಿ ಹೊಡೆದಂತಿದೆ. ಎಲ್ಲರೂ ಒಮ್ಮೆ ನಗುನಗುತ್ತಾ ಓದಿ, ನಂತರ ಆತ್ಮವಿಮರ್ಶೆ ಮಾಡಿಕೊಳ್ಳುವಂತಿದೆ.
ReplyDeleteನಿಮ್ಮ ಅಭಿಪ್ರಾಯ , ಅನಿಸಿಕೆ , ಪ್ರೋಥ್ಸಾಹಕ್ಕೆ ಥ್ಯಾಂಕ್ಸ್ ....., ಬ್ಲಾಗ್ನಲ್ಲೇ ಕಾಮೆಂಟ್ ಹಾಕಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್ ...
DeleteThumbane chanagiddu..
ReplyDeleteThanks Savita..
Deleteಮನೆಯಲ್ಲಿ ಆಫ್ಟರ್ ಆಲ್ ೪-೫ ಜನರನ್ನು ಸಂಬಾಲಿಸಲು ಆಗದೆ ಹೊದವಳು 'ನಾನು ಡಾಕ್ಟರ್ ಆಗ್ತೀನಿ ಗೊತ್ತ....! ಎಷ್ಟೊಂದು ಜನಕ್ಕೆ ಔಷಧ ಕೊಡ್ತೀನಿ ...., ನಾನು ಎನ್ಜ್ನೀರ್ ಆಗ್ತೀನಿ ದೊಡ್ಡ ಮನೆ ಕಡ್ತ್ಹೀನಿ .., ಅಂದುಕೊಂಡಳು?????
ReplyDeleteತಾವು ಯಾರೆಂದು ತಿಳಿದಿಲ್ಲ. ತಮ್ಮ ಹೆಸರನ್ನು ಬರೆದಿಲ್ಲ . ತಾವು ಈ ಬರವಣಿಗೆಯನ್ನು ಸ್ವಲ್ಪ ವಿಶಾಲವಾಗಿ ಓದಿ . ತಿಳಿಯದಿದ್ದರೆ ಮತ್ತೊಮ್ಮೆ ಓದಿ . ಬರವಣಿಗೆಯ ಒಟ್ಟಾರೆ ಒಳ್ಳೆ ವಿಷಯವಾಗಿ ಓದಿದರೆ ಬಹುಷಃ ತುಂಬಾ ಅರ್ಥವಿದೆ ಎನ್ನಿಸುತ್ತದೆ . ಯಾವುದೇ ವ್ಯಕ್ತಿಗತವಾಗಿ ಇದನ್ನು ಓದದೆ ವಿಶಾಲ ಚಿತ್ತದಿಂದ ಓದಬೇಕಾದ ಬರವಣಿಗೆ ಇದು. ನಿಮ್ಮ ದಾಟಿಯಲ್ಲೇ ಬರೆಯುವದಾದರೆ .. ಇಲ್ಲಿ ಬಣ್ಣಿಸಿದ ಹೆಣ್ಣಿಗೆ ೪ - ೫ ಜನರನ್ನ ಸಮಬಾಳಿಸಬೇಕು . ಆದರೆ ಆ ನಾಲ್ಕೂ ಜನಕ್ಕೂ ಕೇವಲ ಈ ಹೆಣ್ಣನ್ನ ಸಮಬಾಳಿಸಿದರೆ ಸಾಲದೇ? ಇವಳೊಬ್ಬಳನ್ನೇ ಸಮಬಾಳಿಸದ ಅವರು ಹೇಗಿರಬೇಕು ಹೊರಪ್ರಪಂಚಕ್ಕೆ .. ನನಗೆ ತುಂಬಾ ಇಷ್ಟವಾದ ಚೈತ್ರಳ ಬರವಣಿಗೆ ಇದು. ಮುಂದುವರೆಸು ಬರವಣಿಗೆಯನ್ನ .
Delete:) ' ಅಂದುಕೊಂಡಳು ' ಅಲ್ಲ .. 'ಅಂದುಕೊಂಡಿದ್ದಳು ' , ಆದರೆ ನಿಮ್ಮ ಇಚ್ಚೆಯಂತೆಯೆ ಎಲ್ಲರನ್ನು 'ಸಂಬಾಳಿಸುತ್ತಿದ್ದಾಳೆ '
Deleteಸಂಬಾಳಿಸುತ್ತಲೇ ತನ್ನ ಜೀವನವನ್ನು ' ಕಳೆಯುತ್ತಿದ್ದಾಳೆ ' , ನಿಮಗೆ ಸಂತೋಷ ತಾನೇ ..? :) , Anyway ನಿಮ್ಮ ಅಭಿಪ್ರಾಯ ಈ ಬರಹದ ಅಂತಃಸತ್ವವನ್ನು ಇನ್ನೂ ಹೆಚ್ಚಿಸಿತು :)., Thanks for it :)
Tumba chennagaidu baraddu..!
ReplyDeleteThank u.. :)
Deleteheart touchng ... chaitrakka nimm fan aagibitte
ReplyDeleteThank u.. Thank u.., nimma protsaaha irali..
DeleteEvery human being (Women & Men) should think 100 times about this. Girl child also have life & dreams to fulfill. An eye opener for Parents who ignore the girl child. Made me to think about my own life.
ReplyDeleteHeart touching story.
Good writing. Keep going
Ohh...! That is your greatness sir...!! One of the best compliment I ever had..., Thanks for it sir..
DeleteHi Chaitra,
ReplyDeleteThank you so much for this writing, in fact it opened my eyes about how my wife feels similar way without really express it. It give me an opportunity to change myself, my thoughts and perspective.
Good writing :)
Its your greatness Shashi....,, If one could think like this than surely it is the height of his humorous and honesty , Thanks for your opinion , it inspired me!!
ReplyDelete