ಊಟ ನಿದ್ದೆಗಳ ಪರಿವೆಯಿಲ್ಲದೆ ಅವರು ಅಲ್ಲಿ ದೇಶವನ್ನು ಕಾಯುತ್ತಿದ್ದಾರೆ..., ಇವರಿಲ್ಲಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.
ದೇಶದ ಗಡಿಗಾಗಿ ಜೀವವನ್ನು ಪಣವಾಗಿಟ್ಟರೆ ಅವರು .. ಇವರು ದೇಶದೊಳಗೆ ಗಡಿಯ ಗಲಭೆಯೆಬ್ಬಿಸುತ್ತಿದ್ದಾರೆ.
ಅವರಲ್ಲಿ ಹಿಮಾಲಯದ ತಪ್ಪಲಿನಲ್ಲಿ -10 ಡಿಗ್ರೀ ಚಳಿಯಲ್ಲಿ ಅನವರತ ನಡೆಯಿತ್ತಿದ್ದರೆ ...... ಇವರಿಲ್ಲಿ AC ರೂಮಿನಲ್ಲಿ ಕುಳಿತು ಭ್ರಷ್ಟಾಚಾರದ ಕತೆಗೆ ಮುನ್ನುಡಿ ಬರೆಯುತ್ತಿದ್ದಾರೆ
ಹುಟ್ಟಿದ ಹಸು ಕಂದಮ್ಮಗಳನ್ನು ಬಿಟ್ಟು ಚೀರುವ ಹೃದಯ ಹೊತ್ತು ಹೊರಟು ನಿಂತಿದ್ದರೆ .., ಇವರಿಲ್ಲಿ ಮಕ್ಕಳಷ್ಟೇ ಅಲ್ಲ .., ಅವರ ಮಕ್ಕಳು ಮೊಮ್ಮಕಳು .., ಮರಿ ಮಕ್ಕಳ ಆಸ್ತಿಗಾಗಿ ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ .
ಒಲಿದ ಒಲುಮೆಯ ಸಂಗಾತಿ ..., ತುಂಬಿದ ಕಣ್ಣುಗಳು .., ಆಕೆಯ ಮನಸ್ಸು ಇನ್ನಿಲ್ಲದಷ್ಟು ಭಾರ .., ಇವರ ಮನೆಯ ಮನೆಯೊಡತಿಗೂ ಅಷ್ಟೇ .. ಯಾರದ್ದೋ ಚೆಲ್ಲಿದ ರಕ್ತದ ಡಿಸೈನ್ ಒಡವೆ ... ಮೈ ತುಂಬಾ ಭಾರೀ ಭಾರ ..
ಯಾವುದೊ ಆಟಗಾರ ಗೆದ್ದಮಾತ್ರಕ್ಕೆ ಹಲವು ಕೋಟಿಗಳನ್ನು ಬಹುಮಾನಿಸುವ ಇವರು .., ಕೊನೆಗೆ ಅವರಲ್ಲಿ ದೇಶಕ್ಕಾಗಿ ಸತ್ತರೂ ಕೂಡ ಅದರ ಬೆಲೆ ಹೆಚ್ಚೆಂದರೆ ಕೆಲವು ಲಕ್ಷಗಳು .
'Give me your blood I shell give you freedom ' ಹಾಗಂದಿದ್ದರು ಫೌಂಡರ್ ಆಫ್ ದಿ ಆರ್ಮಿ ' ನೇತಾಜಿ ಸುಭಾಷ್ಚಂದ್ರ ಬೋಸ್ '. ಈ ತಿಂಗಳ 23 ಅವರು ಹುಟ್ಟಿದ ದಿನ . ಅವರ ಹುಟ್ಟಿದ ದಿನವನ್ನು ಸೈನಿಕರ
ದಿನಾಚಾರಣೆಯನ್ನಾಗಿ ಯಾಕೆ ಆಚರಿಸಬಾರದು ?ದೇಶದ ಎಲ್ಲ ಸೈನಿಕರಿಗೂ ಕೋಟಿ ಕೋಟಿ ಹೃದಯಗಳ ನಮನ ...., ಭೃಷ್ಟ ರಾಜಕಾರಣಿಗಳಿಗೆ ಅವರ ದುಷ್ಟತನಕ್ಕೆ ಕೋಟಿ ಕೋಟಿ ಹೃದಯಗಳ ದಿಕ್ಕಾರವಿರಲಿ ...
ಮೇರ ಭಾರತ್ ಮಹಾನ್
ಜೈ ಹಿಂದ್
ಚೈತ್ರ ಬಿ .ಜಿ.
Gud one...
ReplyDeleteThanks pavi..
ReplyDeleteVery true picture of INDIA. Well written.
ReplyDeleteThanks pragathi..
Deletenice
ReplyDeleteಭದ್ರತೆಯ ಕಾರಣವೊಂದರ ನೆಪ ಮಾಡಿ ನಮ್ಮ ಸೈನಿಕರ ಮುಖ ಪರಿಚಯ ಮಾಡಿಸುವುದಿಲ್ಲ .. ಮಾಡಿಸಿದ್ದರೆ ಅವರಿಗೂ ಕೂಡ ಅಭಿಮಾನಿಗಳ ಸೈನ್ಯವೇ ಸಿದ್ಧವಾಗಿರುತ್ತಿತ್ತು .. ಯುದ್ಧ ಗೆದ್ದರೆ ಒಂದು ಸಾಲಿನ ಸುದ್ಧಿ .. ಆಟ ಗೆದ್ದರೆ ಒಂದು ವಾರವೆಲ್ಲಾ ಪ್ರಚಾರ ... ಗಂಭೀರ ಆಲೋಚನೆ ಆದರೂ ನಾವೇನು ಮಾಡಲು ಸಾಧ್ಯ ಅನ್ನುತ್ತಾ ಮನಸ್ಸು ಮೌನ ..... !!
ReplyDelete(ಗೂಗಲ್ ಅಲ್ಲಿ ಏನೋ ಹುಡುಕುವಾಗ ನಿಮ್ಮ ಈ ಬ್ಲಾಗಿಗೆ ಹೇಗೋ ಬಂದುಬಿಟ್ಟೆ .. ತುಂಬಾ ಸೊಗಸಾಗಿವೆ ಲೇಖನಗಳು..)
ಹೌದು ಖಂಡಿತ ಅದು ನಿಜ .., ನಿಮ್ಮ ಅಭಿಪ್ರಾಯಕ್ಕೆ ಪ್ರೋತ್ಸಾಹಕ್ಕೆ ದನ್ಯವಾದಗಳು .., ಹೀಗೆ ಪ್ರೋತ್ಸಾಹಿಸುತ್ತಿರಿ
Delete