Thursday, October 16, 2014

ಮಗೂ .. ಕಲಿಸು ನಿನ್ನಂತಾಗಲು....




ಕಲಿಸು ಮಗುವು  ನಗಲು
ನಿಷ್ಕಲ್ಮಶವಾಗಿ ;

ಕಲಿಸು ನಿನ್ನಂತೆ ನೋಡಲು
ವಿಸ್ಮಯವಾಗಿ;

ಕಲಿಸು  ನಿನ್ನಂತೆ  ಮನಸು
ಸ್ವಚ್ಚವಾಗಿ;

ಕಲಿಸು  ನಿನ್ನಂತೆ  ಬಿಸುಪು
ಆಪ್ತವಾಗಿ ;

ಕಲಿಸು ನಿನ್ನಂತೆ  ಭಾವ
ಶುದ್ಧವಾಗಿ ;

ಕಲಿಸು ನಿನ್ನಂತೆ ಆತ್ಮ
ಪರಿಶುದ್ದವಾಗಿ ;

ಕಲಿಸು ಮಗೂ   ಅತ್ತಾಗ
ಅಳಲು ;
ಕಲಿಸು  ಮಗೂ   ನಕ್ಕಾಗ
ನಗಲು ;



ನನಗೂ ಕಲಿಸು ಮಗೂ  ನಿನ್ನಂತೆ,
ಇದ್ದು ಬಿಡಲು  ನಾನು...   ನನ್ನಂತೆ .....










    


7 comments:

  1. ಅಂತ ಅದೃಷ್ಟ ನಮಗೆಲ್ಲಿದೆ ಮೇಡಂ.

    ReplyDelete
    Replies
    1. Nija sir... aadarooo manassannu hagurvaagisikolluva sanna prayathna...

      Delete
  2. bahala chennagide :-)
    http://vinaykumarsajjanar.wordpress.com/ nodi

    ReplyDelete
  3. (Y) ಇದು ಸಾದ್ಯವಾಗಿದ್ದರೆ ದೇವರಿಗೆ ಪ್ರತ್ಯೇಕವಾಗಿ ಸ್ವರ್ಗವೊಂದನ್ನು ಸ್ಥಾಪಿಸುವ ಕಷ್ಟ ತಪ್ಪುತಿತ್ತು.....;)

    ReplyDelete
    Replies
    1. Houdu... Guri talupadiddaroo aa haadiyaliiddare manasu hagura hagura

      Delete
    2. ನಿಜವಾಗಿಯೂ ನಿಮ್ಮ ಬರವಣಿಗೆ ತುಂಬಾ ಭಾವಪೂರ್ಣ ಮತ್ತು ಅರ್ಥಪೂರ್ಣವಾಗಿದೆ..

      Delete

----------------------------------