ಬದಲಾದ ಕಾಲವೂ ... ಬದಲಾದ ಆದ್ಯತೆಯೂ ...
ಆಕೆ.. ಮದುವೆಯ ಹೊಸ ಅದ್ಯಾಯದ ಮುಂಬಾಗಿಲಿಗೆ ಬಂದು ನಿಂತಿದ್ದಾಳೆ .., ಎನವಳ ಇಚ್ಛೆ .. ಎನವಳ ನೀರಿಕ್ಷೆ.., ಎನವಳ ಆದ್ಯತೆ.., ತನ್ನವನೊಂದಿಗೆ..,
ಒಂದು ಹೆಣ್ಣು ಒಂದು ಗಂಡಿನ ಆಸರೆಗಾಗಿ ಆಶ್ರಯಕ್ಕಾಗಿ.. ಆಶ್ರಯಿಸುವ ಕಾಲಘಟ್ಟವನ್ನು ದಾಟಿ ಬಂದದ್ದಾಗಿದೆ..., ಸಾಕಗಲಿಕ್ಕಿಲ್ಲ ಅವಳಿಗೆ ಬರೀ ತನ್ನೆಸರಿನ ಮುಂದೊಂದು ಅವನ ಹೆಸರು.., ಸಾಕಗಲ್ಲಿಕ್ಕಿಲ್ಲ ಅವಳಿಗೆ ಹೊಟ್ಟೆ.., ಬಟ್ಟೆ.., ಅದಕ್ಕೂ ಇದಕ್ಕೂ ಕೊರತೆ ಎನಿಸದ ಬದುಕು.., ಬೇಕು ಅವಳಿಗೂ ಆಯ್ಕೆಯ ಅವಕಾಶ.., ಆತನ ಮನ್ನಣೆ ತನ್ನ ಅಭಿಪ್ರಾಯಗಳಿಗೆ.., ತನ್ನ ಆತ್ಮಾಭಿಮಾನಕ್ಕೆ ಧಕ್ಕೆ ತರದಂತವನು , ಬೇಕು ಅವಳಿಗೂ.. ಭಾವನೆಗಳಿಗೆ ಸ್ಪಂದಿಸುವವನು .., ಹಿಡಿ ಗೌರವಿಸುವವನು ...,
ನಿಜವೇ ಅಲ್ಲವೆ.. ಹೆಣ್ಣಿನ ಆದ್ಯತೆಗಳು ಇಂದು ಬದಲಾಗಿವೆ.., ಜೊತೆಗೆ ಗಂಡಿನದ್ದೂ ..! ವಿದ್ಯೆ, ಓದು, ಉದ್ಯೋಗ ವೃತ್ತದೊಳಗೆ ಗಂಡು ಹೆಣ್ಣು ಭೇದವಿಲ್ಲದಂತೆ ಸ್ನೇಹಿತರ ಗುಂಪುಕೂಡಿಕೊಂಡಿರುವಾತನಿಗೆ ಹೆಂಡತಿಯಲ್ಲೂ ಒಂದು ಸ್ನೇಹಿತೆಯನ್ನು ಆತ ಕಂಡುಕೊಳ್ಳುತ್ತಾನೆ.., ಭಾವನೆಗಳನ್ನು ಗೌರವಿಸುತ್ತಾನೆ, ಅರ್ಥೈಸಿಕೊಳ್ಳುತ್ತಾನೆ, ಹೆಚ್ಚು ಹೆಚ್ಚು ಪ್ರಪಂಚ ನೋಡುವ ಆತ 'ತನ್ನನ್ನು ಮನೆಯನ್ನು ಮಕ್ಕಳನ್ನು ನೋಡಿಕೊಂಡಿರಲಿ ' ಎನ್ನುವಂತಹ ಚೌಕ್ಕಟ್ಟಿನಾಚೆ ತನ್ನ ಹೆಜ್ಜೆಯನ್ನು ಯಾವತ್ತಿಗೋ ಇರಿಸಿದ್ದಾನೆ.., ಉದ್ಯೋಗಸ್ತ ಪತ್ನಿಯನ್ನು ಗೌರವಿಸುತ್ತಾನೆ.. ಸಮಾಜದಲ್ಲಿ,, ಸ್ನೇಹಿತರ ನಡುವೆ ಹೆಂಡತಿಯಾದವಳು ಉದ್ಯೋಗಿಯಾಗಿದ್ದಲ್ಲಿ.., ಉದ್ಯಮಿಯಗಿದ್ದಲ್ಲಿ.., ಯಾವುದೇ ರಂಗದಲ್ಲಿ ಪರಿಣಿತಿ ಹೊಂದಿದ್ದಲ್ಲಿ ... ಗೌರವದ ಪಾಲು ಆತನಿಗೂ..., ಉದ್ಯೋಗದಲ್ಲಿ ಇಲ್ಲದಿದ್ದಾಗಿಯೂ ವಿದ್ಯಾವಂತ ಪತ್ನಿಯನ್ನು ಬಯಸುತ್ತಾನೆ, ಉನ್ನತ ಕನಸುಳ್ಳವನಿಗೆ ಉಪ್ಪಿಟ್ಟಿಗೆ ರವೆ ತರಲಿಲ್ಲ , ಹಬ್ಬಕ್ಕೆ ಸೀರೆ ಕೊಡಿಸಿಲ್ಲ ಎನ್ನುವಂತಹದಕ್ಕೆ ಸೀಮಿತವೆನಿಸುವ ಧೋರಣೆಗಳು ಅಡಿಗೆ ಮನೆಯ ಚೌಕಟ್ಟಿನಾಚೆ ಬದುಕು ನೋಡದವಳ ಜೊತೆ ಆತನ ಬದುಕಿಗೆ ಶ್ರುತಿ ಸ್ವರ ಸೇರಲಿಕ್ಕಿಲ್ಲ. ಬದಲಿಗೆ ಅರ್ಥಿಕವಾಗಿ ಆಲೋಚಿಸುವ , ತನ್ನ ಭಾವನೆಗಳಿಗೆ ಸ್ಪಂದಿಸುವ , ತನ್ನೆಲ್ಲ ಅಭಿಪ್ರಾಯ, ನಿರ್ಧಾರಗಳನ್ನು ಸಮಾಲೋಚಿಸುವ ಕಾಲಮಾನಕ್ಕೆ ತಕ್ಕಂತಿರುವ , ಮಕ್ಕಳಿಗೆ ಅತ್ಯನ್ನುತ ಭವಿಷ್ಯವನ್ನು ಕಲ್ಪಿಸಿಕೊಡಬಲ್ಲ, ಜವಭ್ದಾರಿಯುತ ಹೆಂಡತಿ ಆತನಿಗೂ ಬೇಕು.
ಸಂತೋಷವಾಗಲೇ ಬೇಕಾದ್ದು .. ಬದಲಾದ ಹಿರಿಯರ, ಪೋಷಕರ ಆಲೋಚನೆಗಳಿಗೆ.. ನಡುವಳಿಕೆಗೆ.., 'ಮಗನಾ ..?' 'ಮಗಳಾ ?' ಎಂದೂ ಯೋಚಿಸದೆ ವಿದ್ಯಾಭ್ಯಾಸಕ್ಕೆ ಅವರ ಉದ್ಯೋಗಕ್ಕೆ ಕೊಡುತ್ತಿರುವ ಪ್ರಾಮುಖ್ಯತೆ.., ಸಾಕ್ಷಿ ಸಾವಿರದಷ್ಟಿದೆ.., ಮಗಳನ್ನು ವಿದ್ಯಾಭ್ಯಾಸಕ್ಕಾಗಿ ಉದ್ಯೋಗ್ಕಾಗಿ ದೂರದೂರದೂರಿಗೂ ಕಳಿಸಿಕೊಡಲು ಹೆಜ್ಜೆ ಹಿಂದಿಕ್ಕುತ್ತಿಲ್ಲ.., ಪೋಷಕರೇ ಮಗಳಿಗೆ ಬೆಂಗಾವಲಾಗಿದ್ದಾರೆ..., ಇನ್ನೂ ಅಂದರೆ ವಿದ್ಯಾವಂತೆಯಾಗಿರುವ ಉದ್ಯೋಗದಲ್ಲಿರುವ ಸೊಸೆಯನ್ನೇ ಬಯಸುತ್ತಾರೆ .., ಅದರಲ್ಲೊಂದು ಹೆಮ್ಮೆ ಕಂಡುಕೊಂಡಿದ್ದಾರೆ.
ಒಂದೆಡೆ ಎಲ್ಲವೂ .. ಚಂದ ಚಂದ ... ಆದರೆ ಅಷ್ಟು ಸರಾಗವಲ್ಲ ... ಉದ್ಯೋಗಸ್ತ ಮಹಿಳೆಗೆ, ತನ್ನ ಕ್ಷೇತ್ರದಲ್ಲಿ ತಾನು ತೊಡಗಿಸಿಕೊಂಡ ಮಹಿಳೆಗೆ ವಾಸ್ತವದಲ್ಲಿ ಹಲಾವಾರು ಸವಾಲುಗಳು ಎದುರಿಸಬೇಕಿದೆ.
ಹೊರಗಡೆ ಕಾಲಿಟ್ಟು ದುಡಿಯುವ ಮಹಿಳೆ .., ಮನೆಯ ಒಳಗೆ ಎಲ್ಲವನ್ನೂ ತಾನೊಬ್ಬಳೆ ಸಂಬಾಳಿಸಬೇಕು .. ಗಂಡನಾದವನು ತನ್ನ ಉದ್ಯೋಗಿ ಹೆಂಡತಿಯನ್ನು ಇಷ್ಟಪಡಬಲ್ಲವನೆ ಹೊರತು ಮನೆಯ ಜವಭ್ದಾರಿಯಲ್ಲಿ ಆತ ಪಾಲುದಾರನಾಗಲಾರ .., ಆತನ ತಪ್ಪಿಲ್ಲ .., ಸಮಾಜದಿಂದ ಕುಟುಂಬದಿಂದ ಆತನಿಗೆ ಬೋದಿಸದೆ ಬೋದನೆಯಾಗಿರುತ್ತದೆ .., ' ಮಕ್ಕಳ ಜವಾಭ್ದಾರಿ ಅವನು ತೆಗೆದುಕೊಳ್ಳಲಾರ .. 'ಹೆಣ್ಣಿಗೆ ಮಾತ್ರವೇ ಸಹನೆ ಇರುವುದು .. ಇರತಕ್ಕದು .., ಗಂಡಿನಲ್ಲಿ ಅದಿರದು .. ಇರಬೇಕಾಗಿದ್ದಿಲ್ಲ ' ಎನ್ನುವಂತಹ ಭಾವನೆಗಳು ಆತನಲ್ಲಿ ಅಂತರ್ಗತವಾಗಿರುತ್ತದೆ ..., ಇನ್ನು ಹೊರ ಜಗತ್ತಿನಲ್ಲಿ ಕೂಡ ಆಕೆ ಆತನಿಗೆ ಹೊರತಾಗಿರುವ ಪುರುಷನ ದೌರ್ಜನ್ಯ, ರಕ್ಷಣೆ, ಸುರಕ್ಷತೆ ತರಹೇವಾರಿ ಸವಾಲುಗಳು ಆಕೆಯ ಬಗಲಲ್ಲಿ ಕುಳಿತಿರುತ್ತದೆ .
,
ವಾಸ್ತವದಲ್ಲಿ ಹೀಗಿದ್ದರೆ.. ಇನ್ನು 'ಮೆನೆ ಕೆಲಸ', 'ಗಂಡ' , 'ಜವಭ್ದಾರಿ ' ತಲೆಬರಹದಡಿ ಮನಸಿಗೊಂದಿಷ್ಟು ಕಷ್ಟವನ್ನು .. ತಪ್ಪಿತಸ್ತ ಭಾವನೆಯನ್ನು ಆಕೆಗೆ ಬಲವಂತವಾಗಿ ಉಣಿಸುತ್ತವೆ ಒಂದು ಭಾಗದ ಸಮಾಜ .. ಒಂದಷ್ಟು ಮನಸತ್ವ... ,
ಇಲ್ಲವೇ ಎಂದಿಲ್ಲ .., " ' ಮಗಳಿಗೆ ಓದಿಸಿದರೆ.. ಮದುವೆಯಾಗುವವಳು ಸುಮ್ಮನೆ ಹಣ ಖರ್ಚು', 'ಸೊಸೆಯಾದವಳು ತಗ್ಗಿ ಬಗ್ಗಿ ನಡೆದು ಅತ್ತೆ ಮಾವ ಗಂಡ ಮಕ್ಕಳನ್ನು ಮನೆ ಕೆಲಸವನ್ನು ನೋಡಿಕೊಂಡಿರಬೇಕು' , ಹೆಂಡತಿಯಾದವಳು ಯಾವತ್ತೂ ತನಗಿಂತ ಒಂದು ಸ್ತರ ಕೆಳಗಿದ್ದು ತನ್ನ ಅಹಂ ಅನ್ನು ತೃಪ್ತಿ ಪಡಿಸುತ್ತಿರಬೇಕು ', ಅಕ್ಕನೋ ತಂಗಿಯೋ ಆದವಳು ಒಗ್ಗರಣೆಯಾಚೆ, ಚುಕ್ಕಿ ರಂಗೊಲಿಯಾಚೆ ತನ್ನ ಬದುಕನ್ನು ತೆರೆದುಕೊಳ್ಳಬಾರದು ' " ಎನ್ನುವಂತಹ ಮನಸತ್ವಗಳು .. , ದುಃಖದ ಮೊತ್ತ ಹೆಚ್ಚಿದ್ದರೂ ಅಂತವರ ಸಂಖ್ಯ ನಮ್ಮ ನಡುವೆ ಕಡಿಮೆ ಎಂಬುವಲ್ಲಿ ಸಣ್ಣ ಸಂತೋಷವನ್ನು ತಂದಿಟ್ಟುಕೊಳ್ಳೋಣ.
ಬದಲಾವಣೆಯೊಂದೇ ಶಾಶ್ವತವಾಗಿರುವಾಗ ... ಮುಂದಿನ ದಿನಗಳಲ್ಲಿ ಮಹಿಳೆಗೆ ಇನ್ನೂ ಒಳ್ಳೆಯ ನಾಳೆಗಳಿರಲಿ ... , ಅಂತಹ ನಾಳೆಗಳನ್ನು ಒದಗಿಸಿಕೊಡುವ ಮನಸತ್ವ ಜವಭ್ದಾರಿ ಆತನಿಗೆ ಕುಟುಂಬಕ್ಕೆ, ಸಮಾಜಕ್ಕಿರಲಿ.
ಹಾಂ... ಮೊನ್ನೆಯಷ್ಟೇ ೩೪೦ ದಿನಗಳ ಕಾಲ ಅಂತರಿಕ್ಷ ವಾಸವನ್ನು ಕಾರ್ಲೆ ಅವರೊಂದಿಗೆ ಯಶಸ್ವಿಯಾಗಿ ಪೂರೈಸಿಬಂದ ಮೈಖೇಲ್ ಕೊರಿಯೆಂಕೊ, 'ಮಹಿಳಾ ದಿನಾಚಾರಣೆ ' ಗೆ ಇನ್ನೂ ಹೆಚ್ಚಿನ ಮೊತ್ತವನ್ನು ಸೇರಿಸಿದ್ದಾರೆ. ಅತ್ಯಂತ ಹೆಮ್ಮೆ ನಮ್ಮೆಲ್ಲರಗಿದೆ. ಹೆಮ್ಮೆ ಇದ್ದರಷ್ಟೇ ಸಾಲದು ಅಲ್ಲವೇ ..?
ಚೈತ್ರಾ ಬಿ.ಜಿ.
No comments:
Post a Comment
----------------------------------