ಅದೆಷ್ಟೇ ಹಬ್ಬಗಳಿದರೂ ಗಣಪತಿ ಹಬ್ಬಕ್ಕೆ ಏನೋ ವಿಶೇಷತೆ ; ಚಿಕ್ಕವವರಿದ್ದಾಗ ಹಬ್ಬಕ್ಕೆ 15 ದಿನದಿಂದಲೇ ತಯಾರಿ ನಡೆಸುತಿದ್ದೆವು . ಅಪ್ಪ ಗಣಪತಿ ಹಬ್ಬಕ್ಕೆ ಹೊಸ ಬಟ್ಟೆ ತರುತ್ತಿದ್ದ ವಾಡಿಕೆಯಿತ್ತು . ಈ ಸಲದ ಹಬ್ಬಕ್ಕೆ ಯಾವ ಯಾವ ಪಟಾಕಿಗಳನ್ನು ತರಬೇಕೆಂದು ಅಪ್ಪನೊಂದಿಗೆ ಮುಂಚೆಯೇ ಚರ್ಚಿಸುತ್ತಿದ್ದೆ . ಗಣಪತಿಯನ್ನು ಈ ಸಲ ಎಲ್ಲಿಂದ ತರಬೇಕು ಯಾರಿಂದ ಕೊಂಡುಕೊಳ್ಳಬೇಕೆಂದು ಮನೆಯಲ್ಲಿ ಚರ್ಚೆಯಾಗುತ್ತಿತ್ತು . ಗಣಪತಿ ಹಬ್ಬದಂದು ಅಂತ ವಿಶೇಷತೆ ಇಲ್ಲದಿದ್ದರೂ ನಮ್ಮ ಮನೆಯಲ್ಲಿ ಪಂಚಮಿಯಂದು ವಿಶೇಷ ಸಂಬ್ರಮವಿರುತ್ತಿತ್ತು . ಪಂಚಮಿಯೊಂದಿಗೆ ಗಣಹೊಮ ಸತ್ಯನಾರಾಯಣ ಪೂಜೆ ಗೆ ಊರವರು ನೆಂಟರ ಜೊತೆಯಿರುತ್ತಿತ್ತು . ಪಂಚಮಿಯ ದಿನ ಪಟಾಕಿಯ ಹಂಚಿಕೆಯಾಗುತ್ತಿತು .., , ಮನೆಮಂದಿಗೆ, ಬಂದ ಮಕ್ಕಳಿಗೆ , ಅದಕ್ಕಾಗೆ ಕಾಯುತ್ತಿರುವ ಆಳುಗಳಿಗೆ ಹಂಚಬೇಕಾಗಿತ್ತು . ಪಟಾಕಿ ,ಜಾಗಟೆ ಸದ್ದು ,ಆರತಿ ,ಒಂದಷ್ಟು ಬಳೆ ಶಬ್ದ , ಯಾರಿದ್ದೋ ಕಾಲ್ಗೆಜ್ಜೆ ಸದ್ದು , ಸೀರೆಯ ಸರಪರ , .., ಜೊತೆಗೆ ಸಾಮಾನ್ಯವಾಗಿ ಇರುತ್ತಿದ್ದ ಜಿಮುರು ಅಥವ ಜೊರು ಮಳೆ ....ಇವೆಲ್ಲ ಸೇರಿದರೆ ಅದು ಗಣಪತಿ ಹಬ್ಬವಾಗುತ್ತಿತು
ಇದೆಲ್ಲ ನೆನಪಾಗಿದ್ದು ಮೊನ್ನೆ ನಮ್ಮ ಮನೆಗೆ ಗಣಪತಿ ಹಬ್ಬಕ್ಕೆ ಚಂದ ಎತ್ತಲು ಬಂದ ಹುಡುಗನ್ನನ್ನು ನೋಡಿ , ಹಾಗೆ ಬಂದವರಲ್ಲಿ ಈತ ಮೂರನೆಯವನು! ಬೆಂಗಳೂರಿನಲ್ಲಿ ಗಣಪತಿ ಹಬ್ಬವೆಂದರೆ ರಸ್ತೆಗೊಂದು ಗಣಪತಿ! ಬ್ಯಾಂಡು! ಡೋಲು! ಟ್ರಾಫಿಕ್ ಜಾಮು! ಪಡ್ಡೆಗಳ ಹುಚ್ಚುಚ್ಚು ಕುಣಿತ ! ಹಳೆಜನ್ಮದ ವೈರಿ ಎನಿಸುವ ಮೈಕು! ಪ್ರಾಣಹಿಂಸೆ ನೀಡುವಷ್ಟು ಕೆಟ್ಟದಾದ ಅರ್ಕೆಷ್ಟ್ರ! ಪ್ಯಾರಗೆ ಆಗಬಿತ್ತೈತೆ .., ಎನ್ನುವಂತ ಹಿಂದೂ ಮುಂದಿಲ್ಲದ ಹಾಡು ! ಅಲ್ಲ .. ಗಣಪತಿ ಹಬ್ಬಕ್ಕೂ .., ಆ ಹಾಡಿಗೂ ಏನು ಸಂಬಂದ ? ಅರ್ಕೆಷ್ತ್ರದಾಣೆಗೂ ಅರ್ಥವಾಗದ ವಿಷಯ !!
ಬೆಂಗಳೂರಿನಲ್ಲಿ ರಸ್ತೆಗೊಂದು ಗಲ್ಲಿಗೊಂದರಂತೆ ಗಣಪತಿ ಮೂರ್ತಿಯನ್ನು ಕೂರಿಸುತ್ತಾರೆ . ಇಂತ ಗಣಪತಿ ಮೂರ್ತಿಯನ್ನು ತಯಾರಿಸಲು ಬಳಸುವ ಬಣ್ಣವು ತುಂಬಾ ಹಾನಿಕಾರಕ chimicals ನು ಒಳಗೊಂಡಿರುತ್ತವೆ . ಇಂತ ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ . ಅದು ತುಂಬಾ ಅಪಾಯಕಾರಿ . ಸರಕಾರ ಏನೇ ಹೇಳಿದ್ದರೂ ಕೂಡ ಅದು ಕಾರ್ಯರೂಪಕ್ಕೆ ಬಂದಿದೆಷ್ಟು ಎಂಬುದು ಮಾತ್ರ ನಮಗೆಲ್ಲ ಗೊತ್ತಿರುವ ವಿಷಯ . ಈ ಸಲ ಗಣಪತಿ ಹಬ್ಬಕ್ಕಾದರೂ ನೀರಿನಲ್ಲಿ ಗಣಪತಿ ವಿಸರ್ಜನೆಯನ್ನು ಸರಕಾರ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು....., ಒಂದು ನಗರ ಅಥವಾ ಒಂದು ಏರಿಯಕ್ಕೆ ಇಂತಿಷ್ಟೇ ಗಣಪತಿ ಎಂಬ ಪರಿಮಿತಿಯಿಡಬೇಕು....., ಅಷ್ಟೇ ಅಲ್ಲ ... ಗಣಪತಿ ಹಬ್ಬದ ಆಚರಣೆಗೆ ಕೇವಲ 3 ದಿನವನ್ನು ಮಾತ್ರ ಸೀಮಿತಗೊಳಿಸಬೇಕು ....., ಹಮ್ಮ್ .., ಬೇಕುಗಳ ಪಟ್ಟಿ ಸ್ವಲ್ಪ ದೊಡ್ಡದಾಯೈತೆನೋ ......
ಹಬ್ಬಕ್ಕೆ ಊರಿಗೆ ಹೊರಟವರಿಗೆ ಉಂಡೆ ಕಾಯಿಕಡಬು ಕಾಯುತ್ತಿರಬಹುದು , ಇಲ್ಲೇ ಇರುವವರು ಆರ್ಕೆಷ್ಟ್ರದೊಂದಿಗೆ ಹಬ್ಬವನ್ನು ಎಂಜಾಯ್ ಮಾಡಬಹುದು ...!! ಎಲ್ಲರಿಗೂ ಗಣಪತಿ ಹಬ್ಬದ ಶುಭಾಷಯಗಳು !!
No comments:
Post a Comment
----------------------------------