Wednesday, September 11, 2013

ಹೇಳು ಪುರುಷೋತ್ತಮ ..



 ಹೆಂಡತಿಯ ಪಾವಿತ್ರ್ಯಕ್ಕೆ
 ಬೆಂಕಿಯೇ  ಬೇಕಿತ್ತಾ ?
 ಸೀತೆಯ ಸತ್ಯದ ಮೇಲೂ 
 ಶಂಕೆಯಾ  ನಿನಗೆ !?

 ಅಗಸನಂದ  ಮಾತಿಗೆ  
 ಲೋಕದ ಮೆಚ್ಚುಗೆಗೆ 
 ಸೀತೆಯ ಮಾನ ಅಭಿಮಾನ 
 ಸ್ವಾಭಿಮಾನವೇ ಅಹುತಿಯಗಾಬೇಕಿತ್ತಾ ..!?

 ಕೇಳು  ಮರ್ಯಾದ ಪುರುಷ
 ಅಗಸನಂದ  ಮಾತಿಗೆ ಬೇಸರಿಸಲಿಲ್ಲ ಅವಳು!
 ಘಾಸಿಯಾಗಿದ್ದು  ನಿನ್ನ ಪರೀಕ್ಷಗೆ
 ಅದರ ಒಳ ಸೆಳಕುಗಳ ಅರ್ಥಗಳಿಗೆ !!


ನೀನನ್ನಬಹುದು
ಸೀತೆಯ ಪಾವಿತ್ರ್ಯ ಸಾಬೀತಾಯಿತೆಂದು !
  ಹೆಣ್ಣನ್ನು ಶಂಕಿಸಬಹುದು
ಅಗ್ನಿಪರೇಕ್ಷೆಗೊಡ್ಡ ಬಹುದು  ಎಂಬುದೂ ಸಹ  !!


ಗೊತ್ತಾ ನಿನಗೆ ..?
 ಸೀತೆ ಪವಿತ್ರೆ , ಆಕೆಯ ಮಾತೆ ಸಾಕು
 ಸಾಕ್ಷಿ ಶಂಕೆಯ ಅಂಕೆ ಬೇಡವೆಂದಿದ್ದರೆ ನೀನು
 ಅದು ನಿಜದ ಆದರ್ಶವಾಗುತ್ತಿತ್ತಲ್ಲೋ  ಜಗಕೆ !







28 comments:

  1. ತುಂಬಾ ಸುಂದರವಾದ ಕವನ. ಕೊನೆಯ ಸಾಲುಗಳು ನನಗೆ ಇಷ್ಟವಾಯಿತು.

    ReplyDelete
    Replies
    1. ದನ್ಯವಾದಗಳು ಚಂದ್ರಶೇಕರ್ ಈಶ್ವರ್ ನಾಯಕ್ ರವರೆ .., ಹೌದು ನನಗೂ ಕೊನೆಯ ಸಾಲಿನಲ್ಲಿರುವಂತೆ ರಾಮ ಹೇಳಬಾರದಿತ್ತೆಕೆ ? ಅನಿಸುತ್ತದೆ

      Delete
  2. ಪಾವಿತ್ರ್ಯ ಎನ್ನುವುದು ಬೇರ್ಯಾರೋ ತಕ್ಕಡಿಯಲ್ಲಿ ತೂಗಬಲ್ಲ ಮತ್ತು ಇತ್ಯರ್ಥ ಮಾಡಬಲ್ಲ ವಿಚಾರವೇ ಅಲ್ಲ. ಸೀತೆಯಂತಹ ನೂರಾರು ಹೆಣ್ಣು ಮಕ್ಕಳ ಪಾಡು ಈವತ್ತಿಗೂ ಇದೇ ಅಗ್ನಿ ಮುಖಿ.
    ಕೃತಕ್ಕೂ ಕಲಿ ಯುಗಕ್ಕೂ ಅದೇ ಹೆಣ್ಣ ಶೋಷಣೆಯ ಮನಸ್ಥಿತಿ! ಧಿಕ್ಕರವಿರಲಿ...
    facebook profile: Badarinath Palavalli

    ReplyDelete
    Replies
    1. ಹೆಣ್ಣುಮಕ್ಕಳ ಸ್ಥಿತಿಯನ್ನು ಎಷ್ಟು ಚೆನ್ನಾಗಿ ಅರ್ಥೈಸಿದ್ದಿರಿ ಸರ್ ...., 'ಪಾವಿತ್ರ್ಯ ಎನ್ನುವುದು ಬೇರ್ಯಾರೋ ತಕ್ಕಡಿಯಲ್ಲಿ ತೂಗಬಲ್ಲ ಮತ್ತು ಇತ್ಯರ್ಥ ಮಾಡಬಲ್ಲ ವಿಚಾರವೇ ಅಲ್ಲ' , ಎಷ್ಟು ಸಮಂಜಸವಾಗಿದೆ ! ಇಂತ ಶೋಷಣೆಯ ಮನಸ್ತಿತಿಗೆ ದಿಕ್ಕಾರವಿರಲಿ , ಅಭಿಪ್ರಾಯಿಸಿದಕ್ಕೆ ದನ್ಯವಾದಗಳು ಸರ್

      Delete
  3. ಶ್ರೀಮತಿ ಚೈತ್ರಾರವರೆ, ನಿಮ್ಮ ಲೇಖನಿ ಜ್ಞಾನಕ್ಕೆ ನನ್ನ ಮೆಚ್ಚುಗೆ ಇದೆ. ಮಹಾಭಾರತ ಹಾಗು ರಾಮಾಯಣಗಳಂತಹ ಮಹತ್ಪರ್ವಗಳ ಜ್ಞಾನಕ್ಕೆ ನನ್ನ ಶಂಕೆ ಇದೆ. ದಯೆಮಾಡಿ ನಿಮ್ಮ ಈ ಮಹತ್ಪರ್ವಗಳ ಜ್ಞಾನವನ್ನು ವುಲೇಕಿಸುತ್ತೀರ.?

    ReplyDelete
    Replies
    1. Anonymous ' ರವರೆ ನನ್ನ ರಾಮಾಯಣ , ಮಹಾಭಾರತ ಜ್ನ್ಯಾನ ದ ಬಗ್ಗೆ ನಿಮ್ಮ ಶಂಕೆ ನಿಮ್ಮಿಮಿಂದಲೇ ಪರಿಹಾರವಾಗಲಿ , ದಯವಿಟ್ಟು ನಿಮ್ಮ ಶಿಷ್ಯೇಯಾಗಿ ಸ್ವೀಕರಿಸಿ ನನಗೆ ರಾಮಾಯಣ ಭೋದಿಸಿ , ಖಂಡಿತವಾಗಿಯೂ ತಿಳಿದುಕೊಳ್ಳುತ್ತೇನೆ , "ಜ್ಞಾನವನ್ನು ವುಲೇಕಿಸುತ್ತೀರ.?" ಎಂದಿದ್ದೀರಿ , ನನಗದು ಸರಿಯಾಗಿ ಅರ್ಥವಾಗಲಿಲ್ಲ , ಇರಲಿ , ಬಾಲ ರಾಮಾಯಣದಿಂದ , ವಾಲ್ಮೀಕಿ ರಾಮಾಯಣದ ತನಕ ' ಶಂಕೆಗೊಂಡ ರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದ ' ಅನ್ನುವುದರ ಹೊರತಾಗಿ 'ನೀರಿಗೆ ಹಾರೆಂದ' , ಅಥವಾ ಬೇರೆ ಇನ್ನೇನಾದರೂ ಇದ್ದರೆ ಖಂಡಿತ ಅದನ್ನು ತಿಳಿದುಕೊಳ್ಳುವ ಆಸೆ ಕುತೂಹಲ ನನಗೂ ಇದೆ .

      ಇನ್ನು ...' ಅಗ್ನಿ ಪರೀಕ್ಷೆಯ ' ಬಗ್ಗೆ ನೂರು ತರದ ಅನಿಸಿಕೆಗಳಿರಬಹುದು, ಅದರಲ್ಲಿ ನನ್ನ ಅನಿಸಿಕೆಯೂ ಒಂದು ..., ಬೇಕಾದರೆ ಅದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಅಭಿಪ್ರಾಯಿಸಿ , ಇಲ್ಲವಾದರೆ ನನಗೆ ರಾಮಾಯಣ ಭೋದಿಸಿ .

      Delete
  4. ರಾಮ, ಸೀತೆಯನ್ನು ಬೆಂಕಿಯಲ್ಲಿ ಧುಮುಕಲು ಬಿಡದಿದರೆ ಸೀತಾಮಾತೆಯ ಪಾವಿತ್ರತೆ,ವರ್ಛಸ್ಸು ಯಾರಿಗೂ ತಿಳಿದಿರುತಿರಲಿಲ್ಲ. ಹಾಗೆಯೇ ಶ್ರಿರಾಮರು ಶಂಕೆ ಇಂದಲ್ಲ ಸೀತಾಮಾತೆಯನ್ನು ಬೆಂಕಿಯಲ್ಲಿ ಧುಮುಕು ಎಂದಿದ್ದು. ವೇದೋತ್ತಮ ಮಹಾಪುರುಷ ರಾಮರಿಗೆ ತಿಳಿಯದೆ ಇರುವುದು ಇರಲಿಲ್ಲ. ಸೀತೆಯ ಪಾವಿತ್ರತೆ, ಆ ಮಾತೆಯ ಗುಣ ಎಲ್ಲವನ್ನು ಗೊತಿದ್ದ ಪೀಠಲಂಕೃತರಾಗಿದ್ದ ರಾಮರು ಪ್ರಜೆಗಳಿಗೆ ಹಾಗು ಪ್ರಪಂಚಕ್ಕೆ ಸೀತಾ ಮಹಾಮಾತೆಯೆಂದು ತೋರಿಸುವುದಕ್ಕೆ ಮಾತ್ರಾ, ಶಂಕೆಗಾಗಿ ಅಲ್ಲ.ನೀವು ಯಾವ ಯಾವ ಗ್ರಂಥವನ್ನು ಹೇಗೆ ಹೇಗೆ ಅರ್ಥೈಸಿಕೊಂಡಿದ್ದೀರೋ ತಿಲಿಯದು. ಆದರೆ, ಮರ್ಯಾದ ಪುರುಷೋತ್ತಮರಿಗೆ ನಿಂದನೆ ಅಂದು ಒಬ್ಬ ಆಗಸನಿಂದಾದರೆ, ಇಂದು ನಿಮ್ಮಿಂದಾಗುತ್ತಿರುವುದು ಶೋಚನೀಯ. ನಿಮ್ಮ ಬರಹ ಅಂತರ್ಜಾಲದಲ್ಲಿ ಇರುವ ಇತರ ಮತೀಯರಿಗೂ ಕಾಣಿಸಿ ನಮ್ಮ ವೇದೋತ್ತಮರನ್ನು ನಿಂದಿಸುವ ಕಾಲ ಬರದಿರಲೆಂದು ಆಶಿಸುತ್ತೇನೆ. ನೀವು ಈ ಬರಹಗಳಿಂದ ನಿಮ್ಮ ಭಾವನೆ ತೋರ್ಪಡಿಸಲ್ಬಹುದು , ಆದರೆ ನಿಮ್ಮ ಮಗಳೇ ನಿಮ್ಮನು ಅಮ್ಮಾ ರಾಮ ಹೀಗಿರುವಾಗ ನಾವೇಕೆ ರಾಮನವಮಿ ಆಚರಿಸುತ್ತೇವೆ ಎಂದು ಪ್ರಸ್ನಿಸಿದರೆ ನಿಮ್ಮ ಉತ್ತರ ಏನೆಂದಿರುದೋ ಏಂದು ತಿಳಿಯಬೇಕೆಂಬ ಹಂಬಲವಿದೆ

    ReplyDelete
  5. ನೀವು ಬರೆದ ಕವನದಲ್ಲಿ ನನಗೆ ಅಂತಹ ಯಾವುದೇ ನಿಂದನೆ ಕಂಡು ಬರುವುದಿಲ್ಲ. ನನಗೂ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಜ್ಞಾನವಿದೆ. ಇದೊಂದು ಒಳ್ಳೆಯ ಕವನ. ಒಂದು ಸ್ಪಷ್ಟ ಐಡಿ ಇಲ್ಲದವರಿಗೆ ಇಲ್ಲಿ ಕಾಮೆಂಟ್ ಮಾಡಲಾಗದಂತೆ ಸೆಟ್ ಮಾಡಿ. ನೀವು ಬರವಣಿಗೆ ಮುಂದುವರಿಸಿ.

    ReplyDelete
    Replies
    1. ನಿಮ್ಮ ಸ್ಪೂರ್ತಿದಾಯಕ ಸಾಲುಗಳಿಗೆ ಪ್ರೋತ್ಶಾಹಕ್ಕೆ ತುಂಬು ಹೃದಯದ ದನ್ಯವಾದಗಳು ಈಶ್ವರ್ ಚಂದ್ರ ನಾಯಕ್ ಅವರೇ .., ನಿಮ್ಮ ಸಲಹೆ ಸರಿಯಾಗಿದೆ ..., ಸ್ವೀಕರಿಸುತ್ತೇನೆ ...

      Delete
  6. This comment has been removed by the author.

    ReplyDelete
  7. ಇದೊಂದು ಒಳ್ಳೆಯ ಕವನ. ನೀವು ಬರವಣಿಗೆ ಮುಂದುವರಿಸಿ
    ನಂಗೆ ನಿಮಮ್ ಬ್ಲಾಗು ತುಂಬಾ ಇಷ್ಟಾ ಆಯ್ತು .ಬಿಡುವಿದ್ದಾಗ ಎಲ್ಲವನ್ನು ಓದುವೆ.

    ReplyDelete
    Replies
    1. ನಿಮ್ಮ ಪ್ರೋತ್ಶಾಹಕ್ಕೆ ದನ್ಯವಾದಗಳು ' ಕನಸು ' ರವರೆ ..., ಹಮ್ಮ ನಿಮ್ಮ ಬ್ಲಾಗ್ ನೋಡಿದೆ ..., ಎಷ್ಟು ಚೆನ್ನಾಗಿ ಬರೆಯುತ್ತಿರಿ ನೀವು !!

      Delete
  8. Blaming a history person,or an incident which took place is really a waste of time.
    Ofcourse the way u written the poem is nice and u proved your hold on the flow of the poem I impressed.
    But than how you write what you write means a lot. And if we need to comment on something like raamayana mahabharatha then we need to have full knowledge of it then only the comment holds.So I really sry to tell you that you choice is wrong.

    Anyway continue with something good to the society thank you
    (if you have time once visit my blog
    http://mppruthviraj1911.blogspot.com/)

    ReplyDelete
    Replies
    1. I respect your opinion and thoughts. I can feel your concern about our epics and puranaas.
      My intention is not blame any history person , as of my knowledge I din't do so..., Only my concern about " women are alwayes should give answer for everyone for everything even now also, Rama wants seeta should be 'pure' on the eyes of the others. What a embracing moment could be a women should prove herself about her 'pureness'? , what may be the feelings could a woman have? Is this write continue same attitude towards women ?" , These all quetions are on my mind while writing this. If anything wrong with this , I can feel sorry about it and I can correct myself.., Anyway thanks for your valuable comment !

      Delete
    2. This comment has been removed by the author.

      Delete
  9. ® ನೋಡಿ ತುಂಬಾ ಸಂತೋಷವಾಯಿತು.
    visit my site

    http://spn3187.blogspot.in/

    Also say Your Friends
    Find me

    ReplyDelete
  10. ಇಂಗ್ಲಿಷ್ ವ್ಯಾಮೋಹಕ್ಕೆ ಮಾರುಹೋ ಇಂದಿನ ಸಂದರ್ಭದಲ್ಲಿ ಕನ್ನಡದ ಬಗ್ಗೆ ತಮ್ಮ ಆಸ್ಥೆ ನಿಜ್ಜಕ್ಕೂ ಸಂತೋಷದ ವಿಷಯ. ನಿಮ್ಮ ಕವನ ಚೆನ್ನಾಗಿ ಮೂಡಿ ಬಂದಿದೆ. ಹಾಗೇ ನಿಮ್ಮ ಬರವಣಿಗೆ ಮುಂದುವರಿಸಿ.

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಪ್ರತಿಕ್ರಿಯೆಗೆ ಧನ್ಯವಾದಗಳು Malagatti ಅವರೇ

      Delete
  11. ಚೆನ್ನಾಗಿದೆ ಕವನ

    ReplyDelete
  12. ಚೆನ್ನಾಗಿದೆ

    ReplyDelete
    Replies
    1. ಅರ್ಥ ಮೆಚ್ಚುಗೆಗೆ ದನ್ಯವಾದಗಳು

      Delete
  13. ರಾಮ ಇದ್ದ ನಿಜ. ಆದರೆ ಈ ಬಣ್ಣ ಬಣ್ಣದ ಕಥೆ ಯಾರು ಬರೆದರೋ ನೀವು ಅದನ್ನು ನಂಬಿ ನೀವೂ ಒಂದು ಕವನ ಬರೆದಿರಲ್ಲಾ! ಅದೇ ಲಾಭ ಅಷ್ಟೆ. ನಿಮ್ಮ ಕವನ ಚೆನ್ನಾಗಿದೆ

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಮೆಚ್ಚುಗೆಗೆ ದನ್ಯವಾದಗಳು

      Delete
  14. ರಾಮ ಹೇಗಿದ್ದನೊ ಏನೊ...ಪುರಾಣದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂಬುದು ಅಪ್ರಸ್ತುತ. ಆದರೆ ಭಾವನೆಯನ್ನು ಮಾತ್ರ ಹಿಡಿದಿಡುವ ಪ್ರಯತ್ನದಲ್ಲಿ, ಸೀತೆಯ ಮನಸ್ಸಿನ ಆಳದಲ್ಲಿನ ಸ್ತ್ರೀ ಸಹಜವಾದ ಅಳಲು ಉತ್ತಮವಾಗಿ ಮೂಡಿಸಿದ್ದೀರಿ.

    ReplyDelete
  15. ರಾಮ ಹೇಗಿದ್ದನೊ ಏನೊ...ಪುರಾಣದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂಬುದು ಅಪ್ರಸ್ತುತ. ಆದರೆ ಭಾವನೆಯನ್ನು ಮಾತ್ರ ಹಿಡಿದಿಡುವ ಪ್ರಯತ್ನದಲ್ಲಿ, ಸೀತೆಯ ಮನಸ್ಸಿನ ಆಳದಲ್ಲಿನ ಸ್ತ್ರೀ ಸಹಜವಾದ ಅಳಲು ಉತ್ತಮವಾಗಿ ಮೂಡಿಸಿದ್ದೀರಿ.

    ReplyDelete
    Replies
    1. ಅರ್ಥ ಮಾಡಿಕೊಂಡಿದಕ್ಕೆ .. ನಿಮ್ಮ ಅಭಿಪ್ರಾಯಕ್ಕೆ ಮೆಚ್ಚುಗೆಗೆ ದನ್ಯವಾದಗಳು

      Delete

----------------------------------